ದೀಪಾವಳಿ ಹಿನ್ನೆಲೆ ಹಾಸನಾಂಬೆಯ ದರ್ಶನಕ್ಕೆ ಅಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ

|

Updated on: Oct 30, 2024 | 10:19 AM

ಹಾಸನಾಂಬೆಯ ದರ್ಶನಕ್ಕೆ ಇಂದೂ ಸಹ ಗಣ್ಯರು ಅಗಮಿಸಲಿದ್ದಾರೆ. ಈಗಾಗಲೇ ವರದಿ ಮಾಡಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಹಲವಾರು ಮಂತ್ರಿಗಳು ಮತ್ತು ಶಾಸಕರು ದೇವಿಯ ದರ್ಶನ ಮಾಡಿಕೊಂಡಿದ್ದಾರೆ.

ಹಾಸನ: ನಗರದ ಸುಪ್ರಸಿದ್ಧ ಹಾಸನಾಂಬೆ ದೇವಸ್ಥಾನದ ಭಕ್ತರ ದರ್ಶನಕ್ಕಾಗಿ ತೆರೆಯಲ್ಪಟ್ಟು ಇವತ್ತಿಗೆ 5ನೇ ದಿನ. ರಾಜ್ಯದ ನಾನಾ ಭಾಗಗಳಿಂದ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಲೇ ಇದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಇವತ್ತು ದೇಗುಲಕ್ಕೆ ಆಗಮಿಸಿರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ದೇವಸ್ಥಾನದ ಒಳಗಡೆ ನೂಕುನುಗ್ಗಲನ್ನು ಗಮನಿಸಿ. ಗುಡಿಯ ಆಡಳಿತ ಮಂಡಳಿ ಮತ್ತು ಪೊಲೀಸರು ಭಕ್ತರು ದರ್ಶನ ಮಾಡಿಕೊಂಡು ಬೇರೆಯವರಿಗೆ ಸ್ಥಳಾವಕಾಶ ಮಾಡಿಕೊಡಲು ಅವಸರಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕುಟುಂಬದ ಕೆಲ ಸದಸ್ಯರೊಂದಿಗೆ ಹಾಸನಾಂಬೆಯ ದರ್ಶನ ಮಾಡಿಕೊಂಡ ಬಿಎಸ್ ಯಡಿಯೂರಪ್ಪ

Follow us on