ಅಂಕೋಲಾ: ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಲಾರಿಯಲ್ಲಿ ಬಂದ ಡಿಸಿ, ಎಸಿ, ಎಸ್ಪಿ

| Updated By: ರಮೇಶ್ ಬಿ. ಜವಳಗೇರಾ

Updated on: Jul 16, 2024 | 9:41 PM

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಬೃಹತ್ ಗುಡ್ಡ ಕುಸಿದು ಆರು ಜನರನ್ನ ಬಲಿಪಡೆದುಕೊಂಡಿದೆ. ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿರುವುದರಿಂದ ಮಣ್ಣು, ಟ್ಯಾಂಕರ್​ಗಳನ್ನೇ ನದಿಗೆ ನೂಕಿಕೊಂಡು ಹೋಗಿದೆ. ಇದರಿಂದ ಟ್ಯಾಂಕರ್​ ನದಿ ಪಾಲಾಗಿದೆ. ಇನ್ನು ಸ್ಥಳಕ್ಕೆ ಅಧಿಕಾರಿಗಳು ಲಾರಿಯಲ್ಲಿ ಬಂದಿದ್ದಾರೆ.

ಕಾರವಾರ, (ಜುಲೈ 16): ಆಕಾಶವೇ ಕಳಚಿ ಬಿದ್ದಂತೆ ಮಳೆ ಸುರಿಯುತ್ತಿದೆ. ಕಣ್ಣೆದುರಿಗಿರೋ ನದಿ ಎದೆ ಮಟ್ಟಕ್ಕೆ ಹರಿಯುತ್ತಿದೆ. ಬೆನ್ನ ಹಿಂದಿರೋ ಗುಡ್ಡ ಭೂತವಾಗಿ ಕಾಡುತ್ತಿದೆ. ರಾತ್ರಿ ಮಳೆಯಾದ್ರೆ ಯಾವಾಗ ಏನಾಗುತ್ತೋ ಅನ್ನೋ ದಿಗಿಲು. ಹೀಗೆ ಭಯ, ಆತಂಕ, ದಿಗಿಲಿನಲ್ಲೇ ದಿನ ದೂಡುತ್ತಿದ್ದ ಉತ್ತರ ಕನ್ನಡದ ಜನರಿಗೆ ದುತ್ತನೇ ಆಘಾತವೊಂದು ಎದುರಾಗಿದೆ. ಕಣ್ಣೆದುರೇ ಘೋರ ದುರಂತ ನಡೆದು ಹೋಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಬೃಹತ್ ಗುಡ್ಡ ಕುಸಿದು ಆರು ಜನರನ್ನ ಬಲಿಪಡೆದುಕೊಂಡಿದೆ.

ಟ್ಯಾಂಕರ್‌ಗಳು ಕೂಡಾ ನಿಂತಿದ್ವು. ಏಕಧಮ್ ಕುಸಿದ ಗುಡ್ಡ ಟೀ ಅಂಗಡಿ ಮತ್ತು ಮನೆಯನ್ನ ಮುಚ್ಚಿ ಹಾಕಿತ್ತು. ಗುಡ್ಡ ಕುಸಿದ ರಭಸಕ್ಕೆ ಮೂರು ಗ್ಯಾಸ್ ಟ್ಯಾಂಕರ್ ಪೈಕಿ ಎರಡು ಟ್ಯಾಂಕರ್‌ಗಳನ್ನ ಗುಡ್ಡದ ಮಣ್ಣು ತಳ್ಳಿಕೊಂಡು ಹೋಗಿದೆ. ಜೊತೆಗೆ ಮುಂದಿದ್ದ ಮತ್ತೆರಡು ಮನೆ ಮತ್ತು ಕಾರನ್ನ ಗಂಗಾವಳಿ ನದಿಗೆ ನೂಕಿದೆ. ಎರಡು ಗ್ಯಾಸ್ ಟ್ಯಾಂಕರ್‌ಗಳು, ಮೂರು ಮನೆ, ಒಂದು ಕಾರು ನದಿ ಪಾಲಾಗಿದೆ. ಈ ವೇಳೆ ಕ್ಲೀನರ್ ಒಬ್ಬ ಸ್ವಲ್ಪದರಲ್ಲೇ ಪ್ರಾಣ ಉಳಿಸಿಕೊಂಡಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಅಧಿಕಾರಿಗಳು ಲಾರಿಯಲ್ಲಿ ಆಗಮಿಸಿದ್ದಾರೆ. ರಸ್ತೆಯಲ್ಲಿ ನೀರು ನಿಂತಿರುವ ಹಿನ್ನೆಲೆಯಲ್ಲಿ ಕಾರುಗಳು ಓಡಾಡು ಪರಿಸ್ಥಿತಿ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕಾಂದೂ ಹಾಗೂ ಎಸ್ ಪಿ ಎಂ ನಾರಾಯಣ್ ಲಾರಿ ಮೂಲಕವೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Follow us on