ಗೋವಾಗೆ ತೆರಳುತ್ತಿದ್ದ ಲಿಟ್ಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಬೆಳಗಾವಿ ಬಳಿ ಕಾರು ನಿಲ್ಲಿಸಿ ಚಹಾ ಸೇವಿಸುತ್ತಾ ರಸ್ಕ್ ಸವಿದರು!
ಮುಂಬೈಯಿಂದ ರಸ್ತೆ ಮಾರ್ಗವಾಗಿ ಬೆಳಗಾವಿ ಮೂಲಕ ಗೋವಾಗೆ ಹೋಗುವಾಗ ಮಾಸ್ಟರ್ ಬ್ಲಾಸ್ಟರ್ ಕುಂದಾನಗರಿಯ ಹೊರವಲಯದ ಒಂದು ಚಿಕ್ಕ ಟೀ ಸ್ಟಾಲ್ ನಲ್ಲಿ ಚಹಾ ಮತ್ತು ರಸ್ಕ್ ಸವಿದಿದ್ದಾರೆ.
ಬೆಳಗಾವಿ: ಸಚಿನ್ ತೆಂಡೂಲ್ಕರ್ (Sachin Tendulkar) ವಯಸ್ಸು ಅರ್ಧ ಶತಕಕ್ಕೆ ಹತ್ತಿರ ಬಂದಿದ್ದಾಗ್ಯೂ ಅವರಿಲ್ಲಿನ್ನೂ ಇಪ್ಪತ್ತರ ತರುಣರನ್ನು ನಾಚಿಸುವ ಕ್ರಿಯಾಶೀಲತೆ ಮತ್ತು ಎನರ್ಜಿ ಇದೆ. ಅಕ್ಟೋಬರ್ 31ರಂದು ಮುಂಬೈಯಿಂದ ರಸ್ತೆ ಮಾರ್ಗವಾಗಿ ಬೆಳಗಾವಿ ಮೂಲಕ ಗೋವಾಗೆ ಹೋಗುವಾಗ ಮಾಸ್ಟರ್ ಬ್ಲಾಸ್ಟರ್ (Master Blaster) ಕುಂದಾನಗರಿಯ ಹೊರವಲಯದ ಒಂದು ಚಿಕ್ಕ ಟೀ ಸ್ಟಾಲ್ ನಲ್ಲಿ ಚಹಾ ಮತ್ತು ರಸ್ಕ್ ಸವಿದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 (ಎ) ನಲ್ಲಿ ವೈಜು ನಿರ್ತೂರ್ಕರ್ ಎನ್ನುವವರು ಫೌಜಿ ಟೀ ಸ್ಟಾಲ್ ಇಟ್ಟುಕೊಂಡಿದ್ದಾರೆ. ಅವರ ಸ್ಟಾಲ್ ಬಳಿಯೇ ಲಿಟ್ಲ್ ಮಾಸ್ಟರ್ ತಮ್ಮ ಕಾರು ನಿಲ್ಲಿಸಿ ಚಹಾ ಕುಡಿಯುತ್ತಾ ಸ್ಥಳೀಯರೊಂದಿಗೆ ಆತ್ಮೀಯವಾಗಿ ಹರಟಿದ್ದಾರೆ. ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
Latest Videos