ಸಿದ್ದರಾಮಯ್ಯಗೆ ಪತ್ನಿ ವಾಚ್ ಗಿಫ್ಟ್, ಆಕರ್ಷಕವಾಗಿ ಕಾಣುತ್ತಿದ್ದ ವಾಚ್ ಮುಟ್ಟಿ ನೋಡಿದ ಡಿಕೆ ಶಿವಕುಮಾರ್
ಸಿಎಂ ಸಿದ್ದರಾಮಯ್ಯ ಹಾಕಿಕೊಂಡು ಬಂದಿದ್ದ ವಾಚ್ ಎಲ್ಲರ ಗಮನ ಸೆಳೆದಿದ್ದು, ಆಕರ್ಷಕವಾಗಿ ಕಾಣಿಸುತ್ತಿದ್ದ ವಾಚ್ ಅನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವ ಎಂಬಿ ಪಾಟೀಲ್ ಮುಟ್ಟಿ ಮುಟ್ಟಿ ನೋಡಿದ್ದಾರೆ.
ಬೆಂಗಳೂರು: ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ಪತ್ನಿ ಉಡುಗೊರೆಯಾಗಿ ವಾಚ್ ನೀಡಿದ್ದಾರೆ. ಧರ್ಮಪತ್ನಿ ಪಾರ್ವತಿ ಅವರು ಉಡುಗೊರೆ ನೀಡಿರುವ RADO ವಾಚ್ ಧರಿಸಿ ಸಿದ್ದರಾಮಯ್ಯ ಇಂದು ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ವೇಳೆ ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯ ಹೊಸ ವಾಚ್ ಎಲ್ಲರ ಗಮನಸೆಳೆದಿದೆ. ಆಕರ್ಷಕವಾಗಿ ಕಾಣಿಸುತ್ತಿದ್ದ ವಾಚ್ ಅನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವ ಎಂಬಿ ಪಾಟೀಲ್ ಮುಟ್ಟಿ ಮುಟ್ಟಿ ನೋಡಿದ್ದಾರೆ.
Latest Videos