ಹೋಮ್ ಮಿನಿಸ್ಟರ್ ಪರಮೇಶ್ವರ್ ಕೋ ಗುಸ್ಸಾ ಕ್ಯೋಂ ಆತಾ ಹೈ? ಫಜೀತಿಗೆ ಸಿಕ್ಕರೆ ಕೋಪ!

|

Updated on: Aug 26, 2024 | 12:23 PM

ಸರ್ಕಾರ ಅಥವಾ ಸಚಿವರನ್ನು ಮುಜುಗುರಕ್ಕೀಡು ಮಾಡುವ ಪ್ರಶ್ನೆಯನ್ನು ಕೇಳಿದಾಗ ಮಾಧ್ಯಮದವರನ್ನು ದಬಾಯಿಸುವ ಪ್ರಯತ್ನ ಮಾಡೋದು ಹಳೆಯ ತಂತ್ರಗಾರಿಕೆ. ಅದರೆ ಮಾಧ್ಯಮದವರು ಇಂಥದಕ್ಕೆಲ್ಲ ಸೊಪ್ಪು ಹಾಕಿ, ಆಯ್ತು ಸರ್ ನಿಮಗೆ ಬೇಕಾದುದನ್ನು ಹೇಳಿ ಅದನ್ನೇ ವರದಿ ಮಾಡುತ್ತೇವೆ ಅನ್ನಲ್ಲ! ಸರಿಯಾದ ಉತ್ತರ ಸಿಗೋವರೆಗೆ ಪ್ರಶ್ನೆ ಕೇಳುತ್ತಲೇ ಇರ್ತಾರೆ.

ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸಹನೆಯಿಂದ ಉತ್ತರಿಸುವ ಬದಲು ಗೃಹಸಚಿವ ಜಿ ಪರಮೇಶ್ವರ್, ಕೇಳಿದ ಪ್ರಶ್ನೆ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದರಿಂದ ತಾಳ್ಮೆ ಕಳೆದುಕೊಂಡು ಪತ್ರಕರ್ತರನ್ನು ದಬಾಯಿಸುವ ಪ್ರಯತ್ನ ಮಾಡಿದರು. ಆದರೆ ಮಾಧ್ಯಮ ಪ್ರತಿನಿಧಿಗಳು ಅವರು ಒರಟು ಉತ್ತರಕ್ಕೆ ವಿಚಲಿತರಾಗದೆ, ಕೋಪ ಮಾಡಿಕೊಂಡರೆ ಏನೂ ಆಗಲ್ಲ ಸರ್, ದರ್ಶನ್ ಜೈಲಲ್ಲಿ ಮಜಾ ಮಾಡುತ್ತಿರುವ ದೃಶ್ಯ ನೋಡಿ ರೇಣುಕಾಸ್ವಾಮಿ ಅವರ ತಂದೆ ತಾಯಿ ಕಂಗಾಲಾಗಿದ್ದಾರೆ, ತಮಗೆ ನ್ಯಾಯ ಸಿಗುತ್ತೋ ಇಲ್ಲವೋ ಅಂತ ಆತಂಕ ಶುರುವಾಗಿದೆ, ನೀವು ಸಮಾಧಾನದಿಂದ ಉತ್ತರ ಹೇಳಿ ಎಂದಾಗ ಪತ್ರಕರ್ತರು ತಿರುಗಿಬಿದ್ದಾರೆಂಬ ನಿರೀಕ್ಷೆಯಿರದ ಪರಮೇಶ್ವರ್ ಮೆತ್ತಗಾಗುವುದು ಅನಿವಾರ್ಯವಾಗಿತ್ತು! ಪ್ರಶ್ನೆ ಕೇಳಿ ಆದರೆ ನನ್ನನ್ನು ವಿಚಾಣೆಗೊಳಪಡಿಸಬೇಡಿ ಎನ್ನುತ್ತ ಮಾತಾಡುವ ಗೃಹಸಚಿವ, ದರ್ಶನ್ ಪ್ರಕರಣವನ್ನು ಯಾವ ಕಾರಣಕ್ಕೂ ಸಡಿಲ ಮಾಡಲ್ಲ, ಕಾನೂನು ಪ್ರಕಾರ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೋ ತೆಗೆದುಕೊಂಡಿದ್ದೇವೆ ಮುಂದೆಯೂ ತೆಗೆದುಕೊಳ್ಳುತ್ತೇವೆ, ಜೈಲಲ್ಲಿ ನಡೆದಿರುವ ಅನಾಹುತಕ್ಕೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಅನ್ನೋದನ್ನು ಮಾಧ್ಯಮ ಮತ್ತು ಜನರ ಗಮನಕ್ಕೆ ತಂದಿದ್ದೇನೆ, ಯಾರೂ ಅನುಮಾನ ಪಡೋದು ಬೇಡ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೇರೆ ಜೈಲಿಗೆ ದರ್ಶನ್ ಶಿಫ್ಟ್? ದಾಸನ ಆಟಾಟೋಪಕ್ಕೆ ಬೀಳುತ್ತಾ ಕಡಿವಾಣ?

Follow us on