ಚುನಾವಣೆ ಗೆದ್ದ ಪವನ್​ ಕಲ್ಯಾಣ್​ಗೆ ಚಿರಂಜೀವಿ ಮನೆಯಲ್ಲಿ ಅದ್ದೂರಿ ಸ್ವಾಗತ; ವಿಡಿಯೋ ನೋಡಿ..

Updated on: Jun 06, 2024 | 10:04 PM

ಪವನ್​ ಕಲ್ಯಾಣ್​ ಅವರು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಹೈದರಾಬಾದ್​ಗೆ ಮರಳಿದ್ದಾರೆ. ಬಳಿಕ ಅವರು ಸಹೋದರ ಮೆಗಾ ಸ್ಟಾರ್​ ಚಿರಂಜೀವಿ ನಿವಾಸಕ್ಕೆ ಬಂದಿದ್ದಾರೆ. ಅಲ್ಲಿ ಪವನ್​ ಕಲ್ಯಾಣ್​ಗೆ ವೈಭವದ ಸ್ವಾಗತ ನೀಡಲಾಗಿದೆ. ಹೂವಿನ ಮಳೆ ಸುರಿಸಲಾಗಿದೆ. ತಮ್ಮನಿಗೆ ಚಿರಂಜೀವಿ ಹಾರ ಹಾಕಿದ್ದಾರೆ. ಅಣ್ಣನ ಕಾಲಿಗೆ ಬಿದ್ದು ಪವನ್​ ಕಲ್ಯಾಣ್​ ಅವರು ಆಶೀರ್ವಾದ ಪಡೆದ ವಿಡಿಯೋ ಇಲ್ಲಿದೆ..

ಟಾಲಿವುಡ್​ ನಟ ಪವನ್ ಕಲ್ಯಾಣ್​ (Pawan Kalyan) ಅವರು ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಅವರ ಜನಸೇನಾ ಪಕ್ಷ ವಿಜಯ ಪತಾಕೆ ಹಾರಿಸಿದೆ. ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಪವನ್​ ಕಲ್ಯಾಣ್​ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಪವನ್​ ಕಲ್ಯಾಣ್​ ಅವರು ಹೈದರಾಬಾದ್​ಗೆ ಮರಳಿದ್ದಾರೆ. ನಂತರ ಅವರು ಸಹೋದರ ಮೆಗಾ ಸ್ಟಾರ್​ ಚಿರಂಜೀವಿ (Mega Star Chiranjeevi) ನಿವಾಸಕ್ಕೆ ತೆರಳಿದ್ದಾರೆ. ಅಲ್ಲಿ ಪವನ್​ ಕಲ್ಯಾಣ್​ ಅವರಿಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಅವರ ಮೇಲೆ ಹೂವಿನ ಮಳೆ ಸುರಿಸಲಾಗಿದೆ. ಗೆದ್ದು ಬಂದ ತಮ್ಮನಿಗೆ ಚಿರಂಜೀವಿ ಅವರು ಹಾರ ಹಾಕಿದ್ದಾರೆ. ಆರತಿ ಎತ್ತಿ, ತಿಲಕ ಇಟ್ಟು ಪವನ್​ ಕಲ್ಯಾಣ್​ ಅವರನ್ನು ಬರಮಾಡಿಕೊಳ್ಳಲಾಗಿದೆ. ಅಣ್ಣನ ಕಾಲಿಗೆ ನಮಸ್ಕರಿಸಿದ ಪವನ್​ ಕಲ್ಯಾಣ್​ ಅವರು ಆಶೀರ್ವಾದ ಪಡೆದಿದ್ದಾರೆ. ಇಡೀ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ವೇಳೆ ರಾಮ್​ ಚರಣ್​ ಕೂಡ ಪವನ್​ ಕಲ್ಯಾಣ್​ಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ (Pawan Kalyan Viral Video) ನೋಡಿದ ಮೆಗಾ ಫ್ಯಾಮಿಲಿಯ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More