ಆ ಸಿನಿಮಾ ನೋಡದೆಯೂ ಅದಿತಿಗೆ ಫ್ಯಾನ್ ಆದ ಮೇಘನಾ ರಾಜ್ ಸರ್ಜಾ; ಯಾವುದು ಆ ಚಿತ್ರ?
ಅದಿತಿ ಪ್ರಭುದೇವ ಅವರ ನಟನೆಗೆ ಮೇಘನಾ ಫ್ಯಾನ್ ಆಗಿದ್ದಾರೆ. ಅದಿತಿ ಅಭಿನಯದ ‘ರಂಗನಾಯಕಿ’ ಸಿನಿಮಾವನ್ನು ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯ್ ಅವರು ತುಂಬ ಮೆಚ್ಚಿಕೊಂಡಿದ್ದರು.
ನಟಿ ಮೇಘನಾ ರಾಜ್ ಸರ್ಜಾ (Meghana Raj) ಅವರು ಸಿನಿಮಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಂದು (ಡಿ.22) ಅವರು ‘ಗಜಾನನ ಆ್ಯಂಡ್ ಗ್ಯಾಂಗ್’ (Gajanana and Gang) ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರು ಈ ಕಾರ್ಯಕ್ರಮಕ್ಕೆ ಬರಲು ಮೊದಲ ಕಾರಣ ಈ ಚಿತ್ರದ ಹೀರೋ ಶ್ರೀಮಹದೇವ್. ‘ಇರುವುದೆಲ್ಲವ ಬಿಟ್ಟು’ ಸಿನಿಮಾದಲ್ಲಿ ಮೇಘನಾ ರಾಜ್ ಮತ್ತು ಶ್ರೀಮಹದೇವ್ ಜೊತೆಯಾಗಿ ನಟಿಸಿದ್ದರು. ಆ ಸ್ನೇಹದ ಕಾರಣಕ್ಕಾಗಿ ‘ಗಜಾನನ ಆ್ಯಂಡ್ ಗ್ಯಾಂಗ್’ ಟ್ರೇಲರ್ ರಿಲೀಸ್ಗೆ ತಾವು ಬಂದಿರುವುದಾಗಿ ಮೇಘನಾ ಹೇಳಿದರು. ಎರಡನೇ ಕಾರಣ ನಟಿ ಅದಿತಿ ಪ್ರಭುದೇವ (Aditi Prabhudeva). ಹೌದು, ಅದಿತಿಯ ನಟನೆಗೆ ಮೇಘನಾ ಫ್ಯಾನ್ ಆಗಿದ್ದಾರೆ. ಅದಿತಿ ಅಭಿನಯದ ‘ರಂಗನಾಯಕಿ’ (Ranganayaki Movie) ಸಿನಿಮಾವನ್ನು ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯ್ (Pramila Joshai) ಅವರು ತುಂಬ ಮೆಚ್ಚಿಕೊಂಡಿದ್ದಾರಂತೆ. ‘ಆ ಚಿತ್ರದ ಬಗ್ಗೆ ನಮ್ಮ ಅಮ್ಮ ನನ್ನ ಜೊತೆ ಅನೇಕ ಬಾರಿ ಮಾತನಾಡಿದ್ದಾರೆ. ಅದನ್ನು ಕೇಳಿ ಕೇಳಿ ನಾನು ಆ ಚಿತ್ರವನ್ನು ನೋಡದೇ ಇದ್ದರೂ ಕೂಡ ನಿಮಗೆ ಫ್ಯಾನ್ ಆಗಿದ್ದೇನೆ. ನೀವು ನನ್ನ ಫೇವರಿಟ್ ಹೀರೋಯಿನ್ಗಳಲ್ಲಿ ಒಬ್ಬರು’ ಎಂದರು ಮೇಘನಾ ರಾಜ್.
ಇದನ್ನೂ ಓದಿ:
‘ಕನ್ನಡಕ್ಕೆ ಅವಮಾನವಾದ್ರೆ ನಮ್ಮ ತಾಯಿಗೆ ಅವಮಾನ ಆದಂತೆ; ತಾಯಿಗೆ ಬೈದ್ರೆ ಸಾಯ್ಸೋಕೂ ಹೇಸಲ್ಲ; ನಟಿ ಅದಿತಿ
ಮೇಘನಾ ರಾಜ್ ಬದುಕಿಗೆ ಹತ್ತಿರವಾಗಿದೆ ‘ಗಜಾನನ ಆ್ಯಂಡ್ ಗ್ಯಾಂಗ್’ ಚಿತ್ರ; ಟ್ರೇಲರ್ ನೋಡಿ ಅವರು ಹೇಳಿದ್ದೇನು?