Meghana Raj: ‘ರಾಯನ್​ಗೆ ಈಗ 1 ವರ್ಷ 9 ತಿಂಗಳು..’; ಮಗನ ತುಂಟಾಟದ ಬಗ್ಗೆ ಮೇಘನಾ ರಾಜ್ ಮಾತು

| Updated By: ಮದನ್​ ಕುಮಾರ್​

Updated on: Jul 31, 2022 | 4:34 PM

Meghana Raj | Raayan Raj Sarja: ರಾಯನ್​ ರಾಜ್​ ಸರ್ಜಾನ ಆರೈಕೆಯಲ್ಲಿ ತೊಡಗಿಕೊಂಡಿರುವ ಮೇಘನಾ ರಾಜ್​ ಅವರು ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಪುತ್ರನ ಬಗ್ಗೆ ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.

ಚಿರಂಜೀವಿ ಸರ್ಜಾ-ಮೇಘನಾ ರಾಜ್​ ದಂಪತಿ ಪುತ್ರ ರಾಯನ್​ ರಾಜ್​ ಸರ್ಜಾ (Raayan Raj Sarja) ಫೋಟೋ ಮತ್ತು ವಿಡಿಯೋಗಳು ಆಗಾಗ ವೈರಲ್​ ಆಗುತ್ತವೆ. ಆತನ ಆರೈಕೆಯಲ್ಲಿ ಮೇಘನಾ ರಾಜ್​ ಖುಷಿಯಾಗಿದ್ದಾರೆ. ‘ರಾಯನ್​ ಬೆಳೆಯುತ್ತಿದ್ದಾನೆ. ಈಗ ಅವನಿಗೆ ಒಂದು ವರ್ಷ 9 ತಿಂಗಳು ಆಗಿದೆ. ಮಾತು ಕಲಿತಿದ್ದಾನೆ. ತೊದಲು ನುಡಿಯುತ್ತಿದ್ದಾನೆ. ನಾವು ಮಾತನಾಡಿದ್ದನ್ನು ಅನುಕರಿಸಲು ಪ್ರಯತ್ನ ಮಾಡುತ್ತಿದ್ದಾನೆ. ತಾಯಿಯಾಗಿ ನನಗೆ ಈ ಹಂತ ತುಂಬ ಸುಂದರವಾಗಿದೆ’ ಎಂದು ಮೇಘನಾ ರಾಜ್​ (Meghana Raj) ಹೇಳಿದ್ದಾರೆ. ಅನೇಕ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.