AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕೆದಾಟು ಯೋಜನೆ ಪ್ರಧಾನಿ ಮೋದಿಯವರ ಆಶೀರ್ವಾದದಿಂದ ಮಾತ್ರ ಅನುಷ್ಠಾನಗೊಳ್ಳುವುದು ಸಾಧ್ಯ: ದೇವೇಗೌಡ

ಮೇಕೆದಾಟು ಯೋಜನೆ ಪ್ರಧಾನಿ ಮೋದಿಯವರ ಆಶೀರ್ವಾದದಿಂದ ಮಾತ್ರ ಅನುಷ್ಠಾನಗೊಳ್ಳುವುದು ಸಾಧ್ಯ: ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 09, 2024 | 3:05 PM

ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವ ತಾಕತ್ತು, ಅರ್ಹತೆ ಕಾಂಗ್ರೆಸ್ ಅಥವಾ ಇಂಡಿಯಾ ಒಕ್ಕೂಟದಲ್ಲಿ ಒಬ್ಬನಿಗಾದರೂ ಇದೆಯಾ? ಜನ ಮುಗ್ಧರು ಅಂತ ಕಾಂಗ್ರೆಸ್ ನಾಯಕರು ಬಾಯಿಗೆ ಬಂದದ್ದನ್ನೆಲ್ಲ ಮಾತಾಡುತ್ತಾರೆ, ಅದರೆ ತಾನು ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುವುದಾಗಿ ಹೆಚ್ ಡಿ ದೇವೇಗೌಡ ಹೇಳಿದರು.

ರಾಮನಗರ: ಚನ್ನಪಟ್ಟಣದ ಜನ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸುವ ಶಪಥ ಮಾಡಬೇಕು, ನೀವು ಆ ಕೆಲಸ ಮಾಡಿದರೆ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಿ ಅಂತ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿಯರವರನ್ನು ಕೇಳುವುದು ಸಾಧ್ಯವಾಗುತ್ತದೆ, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬರಬೇಕೆಂದರೆ ಅದು ಮೋದಿಯವರ ಆಶೀರ್ವಾದಿಂದ ಮಾತ್ರ ಸಾಧ್ಯ ಅನ್ನೋದನ್ನು ಜನ ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಎಂದು ಚನ್ನಪಟ್ಟಣದ ಸಂತೆಮೊಗೇನಹಳ್ಳಿಯಲ್ಲಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನನ್ನ ರಾಜಕೀಯ ಬದುಕಿನ 62 ವರ್ಷಗಳಲ್ಲಿ ಇಂಥ ಕೆಟ್ಟ ಸರ್ಕಾರವನ್ನು ಯಾವತ್ತೂ ನೋಡಿರಲಿಲ್ಲ: ದೇವೇಗೌಡ