ಬಾಬು ಜಗಜೀವನ್ ರಾಮ್ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆದಿ ಜಾಂಬವ ಸಂಘಟನೆ ಸದಸ್ಯರಿಂದ ಗಲಾಟೆ

ಬಾಬು ಜಗಜೀವನ್ ರಾಮ್ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆದಿ ಜಾಂಬವ ಸಂಘಟನೆ ಸದಸ್ಯರಿಂದ ಗಲಾಟೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 05, 2022 | 8:11 PM

ಆ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದ ಕೋಟಾ ಶ್ರೀನಿವಾದ ಪೂಜಾರಿ ಅವರು ಗಲಾಟೆ ಮಾಡುತ್ತಿದ್ದ ಆದಿ ಜಾಂಬವ ಸಂಘಟನೆ ಸದಸ್ಯರಿಗೆ ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿದರೂ ಅವರು ಸುಮ್ಮನಾಗಲಿಲ್ಲ.

ಮಂಗಳವಾರ ಬೆಂಗಳೂರಿನ ಶಕ್ತಿಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ (banquet hall ) ಆಯೋಜಿಸಲಾಗಿದ್ದ ಭಾರತದ ಮಾಜಿ ಉಪ ಪ್ರಧಾನ ಮಂತ್ರಿ (former deputy Prime Minister) ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದ ದಿವಂಗತ ಬಾಬು ಜಗಜೀವನ್ ರಾಮ್ (Babu Jagajivan Ram) ಅವರ 115 ನೇ ಜನ್ಮ ವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಸ್ವಲ್ಪ ಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಆದಿ ಜಾಂಬವ ಸಂಘಟನೆಗೆ ಸೇರಿದ ಕೆಲ ಜನ ಕಾರ್ಯಕ್ರಮವನ್ನು ಬಹಳ ಕಳಪೆಯಾಗಿ ಆಯೋಜಿಲಾಗಿದೆ, ಜಗಜೀವನ ರಾಮ್ ಅವರ ಖ್ಯಾತಿಗೆ ಕುಂದು ತರುವ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ, ಮತ್ತು ಸರ್ಕಾರಕ್ಕೆ ದಲಿತರ ಶ್ರೇಯೋಭಿವೃದ್ಧಿ ಬಗ್ಗೆ ಯಾವುದೇ ಕಾಳಜಿ ಇಲ್ಲ, ಅವರ ಅಭಿವೃದ್ಧಿ ಒಂದೇ ಒಂದು ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಘೊಷಣೆಗಳನ್ನು ಕೂಗುತ್ತಾ ಗಲಾಟೆ ಮಾಡಿದರು.

ಕಾರ್ಯಕ್ರಮದ ಬಗ್ಗೆ ಪತ್ರಿಕೆಯಲ್ಲಿ ಒಂದು ಚಿಕ್ಕಪ್ರಮಾಣದ ಜಾಹೀರಾತು ನೀಡಿ ಬಾಬು ಅವರಿಗೆ ಅವಮಾನ ಮಾಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಆ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದ ಕೋಟಾ ಶ್ರೀನಿವಾದ ಪೂಜಾರಿ ಅವರು ಗಲಾಟೆ ಮಾಡುತ್ತಿದ್ದ ಆದಿ ಜಾಂಬವ ಸಂಘಟನೆ ಸದಸ್ಯರಿಗೆ ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿದರೂ ಅವರು ಸುಮ್ಮನಾಗಲಿಲ್ಲ. ಅವರ ಗಲಾಟೆ ಹೆಚ್ಚಿದ ಕಾರಣ ಪೊಲೀಸರು ಅವರನ್ನು ಹೊರಗಡೆ ಕರೆದೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿತ್ತು ಮತ್ತು ಕಾರ್ಯಕ್ರಮವನ್ನು ಸ್ವಲ್ಪ ಹೊತ್ತಿನವರೆಗೆ ಸ್ಥಗಿತಗೊಳಿಸಲಾಗಿತ್ತು.

ಕಾರ್ಯಕ್ರಮ ಪುನರಾರಂಭಗೊಂಡಾಗ ಸಂಘಟನೆಯ ಸದಸ್ಯರನ್ನು ಪುನಃ ವಾಪಸ್ಸು ಕರೆಸಲಾಯಿತು. ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

ಇದನ್ನೂ ಓದಿ:  ಜಾನಪದ ಕಲಾವಿದ ದಕ್ಕಲ ಮುನಿಸ್ವಾಮಿ ಸೇರಿ ಐವರಿಗೆ ಬಾಬು ಜಗಜೀವನ್ ರಾಂ ಪ್ರಶಸ್ತಿ