Karnataka Budget Session: ಪರಿಷತ್​ನಲ್ಲಿ ಉತ್ತರ ನೀಡುತ್ತಿದ್ದ ಸಿದ್ದರಾಮಯ್ಯಗೆ ಪದೇಪದೆ ಅಡ್ಡಿಪಡಿಸಿದ ವಿಪಕ್ಷ ಸದಸ್ಯರು

|

Updated on: Feb 21, 2024 | 4:37 PM

ಬಿಜೆಪಿಯ ತೇಜಸ್ವಿನಿ ಗೌಡ ಸರಿ ಸರ್ ಗೊಂದಲಗಳನ್ನು ಆಮೇಲೆ ಕೇಳುತ್ತೇವೆ ಅನ್ನುತ್ತಾರೆ. ಯಾವುದೇ ಕ್ಲ್ಯಾರಿಫಿಕೇಶನ್ ಕೊಡಲು ತಯಾರಿರುವುದಾಗಿ ಸಿದ್ದರಾಮಯ್ಯ ಹೇಳಿದಾಗ ಪುನಃ ಎದ್ದು ನಿಲ್ಲುವ ಎನ್ ರವಿಕುಮಾರ್ ಏನನ್ನೋ ಹೇಳಬಯಸುತ್ತಾರೆ. ಅಗ ಸಿದ್ದರಾಮಯ್ಯ, ನೋಡಿ ಸಭಾಪತಿಗಳೇ, ಇವರು ಬಿಜೆಪಿ ಚೀಫ್ ವ್ಹಿಪ್ ಕೂಡ ಆಗಿದ್ದಾರೆ ಅನ್ನುತ್ತಾರೆ.

ಬೆಂಗಳೂರು: ಸಾಮಾನ್ಯವಾಗಿ ಕೆಳಮನೆಯಲ್ಲಿ (Lower House) ನಡೆಯುವ ದೃಶ್ಯಗಳು ಇವತ್ತು ಮೇಲ್ಮನೆಯಲ್ಲ್ಲಿ (Upper House) ಕಂಡವು. ಪರಿಷತ್ ನಲ್ಲಿ ಸದಸ್ಯರ ಕಡಿಮೆ ಇದ್ದರೂ ವಾಗ್ದಾಳಿಗಳಿಗೆ, ಮಾತಿನ ಚಕಮಕಿಗಳಿಗೆ ಕೊರತೆ ಇರಲಿಲ್ಲ. ಸಿದ್ದರಾಮಯ್ಯ (CM Siddaramaiah) ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದಾಗ ವಿರೋಧ ಪಕ್ಷದ ಸದಸ್ಯರು ಪದೇಪದೇ ಎದ್ದುನಿಂತು ಅಡ್ಡಿಪಡಿಸುತ್ತಿದ್ದಿದ್ದು ಮುಖ್ಯಮಂತ್ರಿ ಅವರನ್ನು ಸಹಜವಾಗೇ ಕೆರಳುವಂತೆ ಮಾಡಿತ್ತು. ಹಾಗಾಗಿ ಮುಖ್ಯಮಂತ್ರಿಯವರು ಭಾಷೆಯ ಮೇಲೆ ಎಲ್ಲೆ ಮೀರಿದ ಪ್ರಸಂಗ ಕೂಡ ಜರುಗಿತು. ದೃಶ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಕಾಶ್ ರಾಠೋಡ್ ಮತ್ತು ಬಿಜೆಪಿಯ ಎನ್ ರವಿಕುಮಾರ್ ನಡುವಿನ ಜುಗಲ್ ಬಂದಿ ವೀಕ್ಷಿಸಬಹುದು. ಅಂತಿಮವಾಗಿ ಸಹನೆ ಕಳೆದುಕೊಂಡ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಯವರು ಮಾತಾಡುವಾಗ ಯಾರೂ ಅಡ್ಡಿಪಡಿಸಬಾರದು, ಪ್ರಶ್ನೆಗಳಿದ್ದರೆ ನೋಟ್ ಮಾಡಿಕೊಂಡು ಆಮೇಲೆ ಕೇಳಿ ಎನ್ನುತ್ತಾರೆ. ಬಿಜೆಪಿಯ ತೇಜಸ್ವಿನಿ ಗೌಡ ಸರಿ ಸರ್ ಗೊಂದಲಗಳನ್ನು ಆಮೇಲೆ ಕೇಳುತ್ತೇವೆ ಅನ್ನುತ್ತಾರೆ. ಯಾವುದೇ ಕ್ಲ್ಯಾರಿಫಿಕೇಶನ್ ಕೊಡಲು ತಯಾರಿರುವುದಾಗಿ ಸಿದ್ದರಾಮಯ್ಯ ಹೇಳಿದಾಗ ಪುನಃ ಎದ್ದು ನಿಲ್ಲುವ ಎನ್ ರವಿಕುಮಾರ್ ಏನನ್ನೋ ಹೇಳಬಯಸುತ್ತಾರೆ. ಅಗ ಸಿದ್ದರಾಮಯ್ಯ, ನೋಡಿ ಸಭಾಪತಿಗಳೇ, ಇವರು ಬಿಜೆಪಿ ಚೀಫ್ ವ್ಹಿಪ್ ಕೂಡ ಆಗಿದ್ದಾರೆ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ