ವಿಜಯಪುರ: ಮೊಬೈಲ್ ಟವರ್ ಏರಿದ ಮಾನಸಿಕ ಅಸ್ವಸ್ಥ, ವಿಡಿಯೋ ನೋಡಿ
ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಶಿವು ಕಡಣಿ ಮೊಬೈಲ್ ಟವರ್ ಏರಿ ಕುಳಿತಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಯುವಕ ಶಿವು ಕಡಣಿ ಮಾನಸಿಕ ಅಸ್ವಸ್ಥನಾಗಿದ್ದು, ಈ ಹಿಂದೆ ಕೂಡ ಸಿಂದಗಿ ತಾಲೂಕಿನ ಬಳಗಾನೂರು ಹಾಗೂ ಇತರೆ ಗ್ರಾಮಗಳಲ್ಲಿರುವ ಟವರ್ಗಳನ್ನು ಏರಿದ್ದನು.
ವಿಜಯಪುರ, ಮಾರ್ಚ್ 19: ಮಾನಸಿಕ ಅಸ್ವಸ್ಥ ಯುವಕ ಇಂಡಿ (Indi) ಪಟ್ಟಣದ ಬಸವೇಶ್ವರ ಸರ್ಕಲ್ನಲ್ಲಿರುವ ಮೊಬೈಲ್ ಟವರ್ನ್ನು (Mobile Tower) ಏರಿದ್ದಾನೆ. ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಶಿವು ಕಡಣಿ ಟವರ್ ಏರಿ ಕುಳಿತಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಯುವಕನನ್ನು ಕೆಳಗಿಳಿಸಿದ್ದಾರೆ. ಬಳಿಕ ಪೊಲೀಸರು ಶಿವು ಕಡಣಿಯನ್ನು ಮನೆಗೆ ಬಿಟ್ಟು ಬಂದರು. ಶಿವು ಕಡಣಿ ಈ ಹಿಂದೆ ಸಿಂದಗಿ ತಾಲೂಕಿನ ಬಳಗಾನೂರು ಹಾಗೂ ಇತರೆ ಗ್ರಾಮಗಳಲ್ಲಿರುವ ಟವರ್ಗಳನ್ನು ಏರಿದ್ದನು. ಇಂಡಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ