ಹಗ್ಗ ಹಿಡಿದು ಹೊಳೆ ದಾಟಿ ದುರಸ್ತಿ ಕಾರ್ಯ; ಮೆಸ್ಕಾಂ ಸಿಬ್ಬಂದಿ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಮೂಡ್ಸಾಲಿ ಗ್ರಾಮದಿಂದ ಸ್ಥಳೀಯರು ಕರೆ ಮಾಡಿ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯದ ಬಗ್ಗೆ ದೂರು ನೀಡಿದ್ದರು. ಕರೆ ಸ್ವೀಕರಿಸಿದ್ದ ಹೆಬ್ರಿ ಶಾಖೆಯ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಸಮಸ್ಯೆ ತಿಳಿಯುತ್ತಿದ್ದಂತೆ ತಕ್ಷಣವೇ ಹೊಳೆ ದಾಟಿ ಸಮಸ್ಯೆ ಸರಿಪಡಿಸಿದ್ದಾರೆ. ಹೊಳೆ ದಾಟುವ ವಿಡಿಯೋ ವೈರಲ್ ಆಗಿದೆ.
ಉಡುಪಿ, ಸೆ.26: ವಿದ್ಯುತ್ ಕಂಬದಲ್ಲಿ ಸಮಸ್ಯೆ ಇರುವುದನ್ನು ಅರಿತ ಸಿಬ್ಬಂದಿ ಹಗ್ಗ ಹಿಡಿದು ಹೊಳೆ ದಾಟಿ ದುರಸ್ತಿ ಕಾರ್ಯ ಮಾಡಿದ್ದು ಮೆಸ್ಕಾಂ ಸಿಬ್ಬಂದಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಮೂಡ್ಸಾಲಿ ಗ್ರಾಮದಿಂದ ಸ್ಥಳೀಯರು ಕರೆ ಮಾಡಿ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯದ ಬಗ್ಗೆ ದೂರು ನೀಡಿದ್ದರು. ಕರೆ ಸ್ವೀಕರಿಸಿದ್ದ ಹೆಬ್ರಿ ಶಾಖೆಯ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಸಮಸ್ಯೆ ತಿಳಿಯುತ್ತಿದ್ದಂತೆ ತಕ್ಷಣವೇ ಹೊಳೆ ದಾಟಿ ಸಮಸ್ಯೆ ಸರಿಪಡಿಸಿದ್ದಾರೆ. ದೂರು ನೀಡಿದ ಸ್ವಲ್ಪ ಹೊತ್ತಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಹೊಳೆ ದಾಟುವ ಸಿಬ್ಬಂದಿಯ ವಿಡಿಯೋ ವೈರಲ್ ಆಗಿದೆ. ಪ್ರಮೋದ್ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos