ಚಿಕ್ಕಮಗಳೂರು: ಅಬ್ಬರಿಸಿದ ಮಳೆ, ರಸ್ತೆ ಸಂಪರ್ಕವಿಲ್ಲದೆ ವೃದ್ಧೆಯನ್ನು 3 ಕಿಮೀ ಹೊತ್ತುಕೊಂಡೇ ಸಾಗಿಸಿದ ಗ್ರಾಮಸ್ಥರು

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಮಳೆ ಆರ್ಭಟ ಜೋರಾಗಿದೆ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮವಾಗಿ ನೆಲ್ಲಿಬೀಡು, ಕಟ್ಟೆಮನೆ, ಅಜ್ಜಿಗದ್ದೆ, ಆರೋಳ್ಳಿ, ಕೋಣೆಮನೆ ಸೇರಿದಂತೆ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ರಸ್ತೆ ಸಂಪರ್ಕವಿಲ್ಲದೆ ಹಲವು ಗ್ರಾಮಗಳ ಜನರು ಪರದಾಡುವಂತಾಗಿದೆ.

ಚಿಕ್ಕಮಗಳೂರು: ಅಬ್ಬರಿಸಿದ ಮಳೆ, ರಸ್ತೆ ಸಂಪರ್ಕವಿಲ್ಲದೆ ವೃದ್ಧೆಯನ್ನು 3 ಕಿಮೀ ಹೊತ್ತುಕೊಂಡೇ ಸಾಗಿಸಿದ ಗ್ರಾಮಸ್ಥರು
| Updated By: ಗಣಪತಿ ಶರ್ಮ

Updated on: Sep 26, 2024 | 9:38 AM

ಚಿಕ್ಕಮಗಳೂರು, ಸೆಪ್ಟೆಂಬರ್ 26: ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿದುಕೊಂಡ ಪರಿಣಾಮ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ಅನಾರೋಗ್ಯಪಿಡಿತೆ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲು ಕುಟುಂಬಸ್ಥರು ಪರದಾಡುವಂತಾಯಿತು. ವೃದ್ಧೆಯನ್ನು 3 ಕಿ.ಮೀ. ಹೊತ್ತುಕೊಂಡೇ ಸಾಗಿಸಿದ ಗ್ರಾಮಸ್ಥರು ಕಳಸ‌ ತಾಲೂಕು ಆಸ್ಪತ್ರೆಗೆ ವೃದ್ಧೆ ದಾಖಲಿಸಿದ್ದಾರೆ. ತೂಗು ಸೇತುವೆ ಮೇಲೆ ವೃದ್ಧೆಯನ್ನು ಗ್ರಾಮಸ್ಥರು ಸಾಗಿಸುವ ವಿಡಿಯೋ ‘ಟಿವಿ9’ಗೆ ಲಭ್ಯವಾಗಿದೆ.

ಈ ಭಾಗದಲ್ಲಿ ಸಮರ್ಪಕ ಸೇತುವೆ ನಿರ್ಮಿಸಿಕೊಡುವಂತೆ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ, ಗ್ರಾಮಸ್ಥರ ಮನವಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us