ವಾಸ್ತವಿಕ ಸಂಗತಿಗಳನ್ನು ವರಿಷ್ಠರಿಗೆ ವಿವರಿಸಲು ದೆಹಲಿ ಹೋಗಿದ್ದೆ, ಚಾಡಿ ಹೇಳಲಲ್ಲ: ಬಿವೈ ವಿಜಯೇಂದ್ರ
ವಕ್ಫ್ ಬೋರ್ಡ್ ವಿರುದ್ಧ ಬಿಜೆಪಿ ನಡೆಸುತ್ತಿದ್ದ ಹೋರಾಟವನ್ನು ನಿಲ್ಲಿಸುವಂತೆ ತಾನೇ ಹೇಳಿದ್ದು, ದೆಹಲಿಯ ವರಿಷ್ಠರಲ್ಲ ಎಂದು ವಿಜಯೇಂದ್ರ ಹೇಳುತ್ತಾರೆ. ಕೇಂದ್ರದ ಸಂಸದೀಯ ಮಂಡಳಿಗೆ ಹೋರಾಟದ ವರದಿಯನ್ನು ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ನೀಡಲಾಯಿತು ಎಂದು ಹೇಳುವ ಅವರು ಹೋರಾಟದ ರೂವಾರಿಯಾಗಿದ್ದ ಬಸನಗೌಡ ಯತ್ನಾಳ್ ಹೆಸರನ್ನೇ ಉಲ್ಲೇಖಿಸುವುದಿಲ್ಲ.
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿವ ಸಮರ ಹೊಸ ವರ್ಷದಲ್ಲಾದರೂ ಕೊನೆಗೊಂಡೀತೇ? ಖಚಿತವಾಗಿ ಹೇಳಲಾಗದು ಮಾರಾಯ್ರೇ. ಇವತ್ತು ಶಿವಮೊಗ್ಗದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ವಿಜಯೇಂದ್ರ ಅತಿ ಶೀಘ್ರದಲ್ಲಿ ಬಿಜೆಪಿ ವರಿಷ್ಠರು ಪಕ್ಷದ ಎಲ್ಲ ಆಂತರಿಕ ಸಮಸ್ಯೆಗಳಿಗೆ ಇತಿಶ್ರೀ ಹಾಡಲಿದ್ದಾರೆ ಎಂದೇನೋ ಹೇಳುತ್ತಾರೆ. ಅದರೆ, ಕಳೆದ ವರ್ಷವಿಡೀ ಅವರು ಅದನ್ನೇ ಹೇಳಿದ್ದರು ಅಂತ ಕನ್ನಡಿಗರಿಗೆ ಚೆನ್ನಾಗಿ ಗೊತ್ತು. ರಾಜ್ಯದ ಪ್ರಸಕ್ತ ವಿದ್ಯಮಾನಗಳನ್ನು ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ವಿವರಿಸಲು ಹೋಗಿದ್ದೇನೆಯೇ ಹೊರತು ಯಾರೋ ಒಂದಿಬ್ಬರು ಮಾತಾಡಿರುವಂತೆ ಚಾಡಿ ಹೇಳಲು ಅಲ್ಲ ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ ಬಿ.ವೈ. ವಿಜಯೇಂದ್ರ; ಕರ್ನಾಟಕದ ರಾಜಕೀಯದ ಬಗ್ಗೆ ಚರ್ಚೆ