ಚಿಕ್ಕಮಗಳೂರು: ಬುಕ್ಕಸಾಗರ ಗೇಟ್ ಬಳಿ ಹಾಲಿನ ಟ್ಯಾಂಕರ್ ಪಲ್ಟಿ, ಸಾವಿರಾರು ಲೀಟರ್ ಹಾಲು ಮಣ್ಣುಪಾಲು

Edited By:

Updated on: Jun 26, 2025 | 11:43 AM

ರಸ್ತೆ ಮೇಲೆ ಬಿದ್ದಿರುವ ಟ್ಯಾಂಕರ್, ರಸ್ತೆಯಲ್ಲೆಲ್ಲ ಹರಿದುಹೋಗುತ್ತಿರುವ ಹಾಲು! ಈ ದೃಶ್ಯ ಕಂಡಿದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ‌ ಬುಕ್ಕಸಾಗರ ಗೇಟ್ ಬಳಿ. ಚಾಲಕನ ನಿಯಂತ್ರಣ ತಪ್ಪಿದ ಹಾಲಿನ ಟ್ಯಾಂಕರ್ ಪಿಕ್ಅಪ್ ವಾಹನದ ಮೇಲೆ ಬಿದ್ದಿದ್ದೇ ಈ ಎಲ್ಲ ಅಧ್ವಾನಗಳಿಗೆ ಕಾರಣ. ವಿಡಿಯೋ ಇಲ್ಲಿದೆ ನೋಡಿ.

ಚಿಕ್ಕಮಗಳೂರು, ಜೂನ್ 26: ಚಾಲಕನ ನಿಯಂತ್ರಣ ತಪ್ಪಿ ಸಾವಿರಾರು ಲೀ.ಹಾಲಿನ ಟ್ಯಾಂಕರ್​ ಪಲ್ಟಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ‌ ಬುಕ್ಕಸಾಗರ ಗೇಟ್ ಬಳಿ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಪಿಕಪ್​​ ವಾಹನದ ಮೇಲೆ ಹಾಲಿನ ಟ್ಯಾಂಕರ್​ ಬಿದ್ದಿದೆ. ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ಯಾಂಕರ್ ಪಲ್ಟಿಯಾಗಿದ್ದರಿಂದ ಸಾವಿರಾರು ಲೀಟರ್ ಹಾಲು ಮಣ್ಣುಪಾಲಾಯಿತು. ವಿಡಿಯೋ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More