ನೆಲಮಂಗಲದ ಬಳಿ ಚಾಲಕನ ಕಂಟ್ರೋಲ್ ತಪ್ಪಿ ಉರುಳಿಬಿದ್ದ ಕ್ಯಾಂಟರ್, ಚಾಲಕನಿಗೆ ಅಪಾಯವಿಲ್ಲ

ನೆಲಮಂಗಲದ ಬಳಿ ಚಾಲಕನ ಕಂಟ್ರೋಲ್ ತಪ್ಪಿ ಉರುಳಿಬಿದ್ದ ಕ್ಯಾಂಟರ್, ಚಾಲಕನಿಗೆ ಅಪಾಯವಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 13, 2024 | 11:14 AM

ಈ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯ ಅನ್ನೊದನ್ನು ಜನರ ಪ್ರತಿಕ್ರಿಯೆಯಿಂದ ಅರ್ಥಮಾಡಿಕೊಳ್ಳಬಹುದು. ಉರುಳಿಬದ್ದ ಕ್ಯಾಂಟರ್ ಪಕ್ಕದಿಂದ ಹಲವಾರು ದ್ವಿಚಕ್ರ ಮತ್ತು ಬೇರೆ ವಾಹನಗಳು ಹಾದು ಹೋಗುತ್ತಿವೆ, ಅದರೆ ಯಾರೊಬ್ಬರೂ ಏನಾಗಿದೆ ಅಂತ ವಿಚಾರಿಸುವ ಗೋಜಿಗೆ ಹೋಗಲ್ಲ.

ನೆಲಮಂಗಲ: ನೆಲಮಂಗಲ ಪಟ್ಟಣದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ (National highway) ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿಬಿಟ್ಟಿದೆ. ರಸ್ತೆ ನಿರ್ಮಾಣದಲ್ಲಿ ಯಾವುದಾದಾರು ಅವೈಜ್ಞಾನಿಕ (unscientific) ಅಂಶವಿದೆಯೇ ಅಂತ ಒಮ್ಮೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳು ಪರೀಕ್ಷಣೆ ನಡೆಸಿದರೆ ತಪ್ಪೇನಿಲ್ಲ. ಇಂದು ಬೆಳಗ್ಗೆ ತುಮಕೂರುನಿಂದ ಚಹಾ ಪುಡಿಯ ಚೀಲಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದ ಕ್ಯಾಂಟರೊಂದು ನೆಲಮಂಗಲದ ದೊಡ್ಡೇರಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಗಮನಿಸಬೇಕಾದ ಸಂಗತಿಯೆಂದರೆ, ಮಿನಿ ಟ್ರಕ್ ಪಲ್ಟಿ ಹೊಡೆದರೂ ಅದರ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಜರುಗಿದೆ. ಚಹಾ ಪುಡಿಯ ಮೂಟೆಗಳನ್ನು ಮತ್ತೊಂದು ವಾಹನದಲ್ಲಿ ಲೋಡ್ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಈ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯ ಅನ್ನೊದನ್ನು ಜನರ ಪ್ರತಿಕ್ರಿಯೆಯಿಂದ ಅರ್ಥಮಾಡಿಕೊಳ್ಳಬಹುದು. ಉರುಳಿಬದ್ದ ಕ್ಯಾಂಟರ್ ಪಕ್ಕದಿಂದ ಹಲವಾರು ದ್ವಿಚಕ್ರ ಮತ್ತು ಬೇರೆ ವಾಹನಗಳು ಹಾದು ಹೋಗುತ್ತಿವೆ, ಅದರೆ ಯಾರೊಬ್ಬರೂ ಏನಾಗಿದೆ ಅಂತ ವಿಚಾರಿಸುವ ಗೋಜಿಗೆ ಹೋಗಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜಸ್ಥಾನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್​ಗೆ ಕಾರು ಡಿಕ್ಕಿ, ಒಂದೇ ಕುಟುಂಬದ ನಾಲ್ವರು ಸಾವು