AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊರು ಹಬ್ಬಗಳು, ಸಮ್ಮರ್​​ ಸೀಸನ್​ ಶುರುವಾಗಿದೆ - ನಿಂಬೆ ಹಣ್ಣಿನ ಬೆಲೆ ಎಷ್ಟು ಗೊತ್ತಾ?

ಊರು ಹಬ್ಬಗಳು, ಸಮ್ಮರ್​​ ಸೀಸನ್​ ಶುರುವಾಗಿದೆ – ನಿಂಬೆ ಹಣ್ಣಿನ ಬೆಲೆ ಎಷ್ಟು ಗೊತ್ತಾ?

ಸಾಧು ಶ್ರೀನಾಥ್​
|

Updated on:Mar 13, 2024 | 9:39 AM

Chennai: ತಮಿಳುನಾಡಿನ ಗ್ರಾಮವೊಂದರಲ್ಲಿ ಒಂದು ನಿಂಬೆಹಣ್ಣಿನ ಬೆಲೆ 35 ಸಾವಿರ ರೂಪಾಯಿ ಇದೆ. ಹೌದು ನೀವು ಕೇಳಿದ್ದು ಸರಿ. ಏನಪ್ಪಾ ಆ ನಿಂಬೆಹಣ್ಣಿನ ವಿಶೇಷತೆ ಅಂತಂದರೆ ತಮಿಳುನಾಡಿನ ಶಿವಗರಿ ಗ್ರಾಮದ ಶಿವನ ದೇವಸ್ಥಾನದಲ್ಲಿ ಇದೇ ತಿಂಗಳ 8ರಂದು ನಡೆದ ವಿಶೇಷ ಪೂಜೆ ನಡೆಯಿತು. ಆಗ ಭಕ್ತರು ದುಬಾರಿ ಬೆಲೆ ಕೊಟ್ಟು 35 ರೂಪಾಯಿಗೆ ಒಂದು ನಿಂಬೆಹಣ್ಣನ್ನು ಖರೀದಿ ಮಾಡಿದರು.

ಬೇಸಿಗೆ ಕಾಲಿಡುತ್ತಿದ್ದಂತೆ, ನಾನಾ ಕಡೆ ಊರು ಹಬ್ಬಗಳು ಶುರುವಾಗುತ್ತಿದ್ದಂತೆ ನಿಂಬೆ ಹಣ್ಣಿನ ಬೆಲೆ ಸೀದಾ ಗಗನಕ್ಕೆ ಚಿಮ್ಮುತ್ತದೆ. ವಾಸ್ತವವಾಗಿ ಅದು ನಿಂಬೆ ಬೆಳೆ ಕಟಾವು ಕಾಲ. ಆವಕ ಚೆನ್ನಾಗಿರುತ್ತದೆ. ಗಮನಾರ್ಹವೆಂದರೆ ಆಗತಾನೆ ಚಳಿಗಾಲದ ಸೀಸನ್​ ಮುಗಿದಿರುತ್ತದೆ. ಆ ಕಾಲದಲ್ಲಿ ನಿಂಬೆ ಹಣ್ಣು ಬಳಕೆ ಕಡಿಮೆಯಿದ್ದು ಅದರ ಬೆಲೆಯೂ ಕಡಿಮೇ ಆಗಿರುತ್ತದೆ. ಏಕೆಂದರೆ ಆ ಕಾಲದಲ್ಲಿ ನಿಂಬೆಗೆ ಬೇಡಿಕೆ ತಗ್ಗಿರುತ್ತದೆ. ಚಳಿಗಾಲದಲ್ಲಿ ನಿಂಬೆಹಣ್ಣು ಬಳಸುವುದು ಕಡಿಮೆ ಹಾಗಾಗಿ ಖರೀದಿಯೂ ಕಡಿಮೆಯಿದ್ದು, ಬೆಲೆ ಕಡಿಮೆಯೇ ಇರುತ್ತದೆ. ಮಾರುಕಟ್ಟೆಯಲ್ಲಿ 21 ರೂಪಾಯಿಗೆ 5 ಹಣ್ಣು ಮಾರಾಟ ವಾಗುತ್ತಿರುತ್ತದೆ. ಅದೇ ಬೇಸಿಗೆ ಕಾಲಿಡುತ್ತಿದ್ದಂತೆ ನಿಂಬೆಗೆ ಎಲ್ಲಿಲ್ಲದ ಬೇಡಿಕೆ ಬಂದುಬಿಡುತ್ತದೆ. ಒಂದು ನಿಂಬೆ ಹಣ್ಣು ಬೆಲೆಯೇ 10 ರೂಪಾಯಿಗೆ ಚಿಮ್ಮಿಬಿಡುತ್ತದೆ. ಮಾರುಕಟ್ಟೆಯಲ್ಲಿ ಚೌಕಾಸಿಗೆ ಅವಕಾಶವೇ ಇಲ್ಲದಂತೆ ವ್ಯಾಪಾರಿಗಳು ಖರೀದಿದಾರರನ್ನು ಹಚಾ ಎನ್ನುವುದೂ ಉಂಟು. ಈಗ ಬೆಂಗಳೂರಿನಲ್ಲಂತೂ ಬಿಡಿ ನಿಂಬೆಹಣ್ಣು ಕೇಳುವ ಹಾಗೇ ಇಲ್ಲ. ಇನ್ನು ಯುಗಾದಿ, ರಾಮನವಮಿ ವೇಳೆಗೆ ನಿಂಬೆ ಹಣ್ಣು ಖರೀದಿ ಮತ್ತಷ್ಟು ದುಬಾರಿಯಾಗಲಿದೆ.

ಇನ್ನು ಬೇಸಿಗೆಯ ಬಯಲು ಪ್ರದೇಶಗಳಾದ ಆಂಧ್ರ, ತಮಿಳುನಾಡಿನಲ್ಲಿಯೂ ನಿಂಬೆಹಣ್ಣಿನ ಬೆಲೆ ಹೆಚ್ಚಾಗಿದೆ. ಇದೆಲ್ಲದರ ಆಚೆಗೆ ನೋಡುವುದಾದರೆ ತಮಿಳುನಾಡಿನ ಗ್ರಾಮವೊಂದರಲ್ಲಿ ಒಂದು ನಿಂಬೆಹಣ್ಣಿನ ಬೆಲೆ 35 ಸಾವಿರ ರೂಪಾಯಿ ಇದೆ. ಹೌದು ನೀವು ಕೇಳಿದ್ದು ಸರಿ. ಏನಪ್ಪಾ ಆ ನಿಂಬೆಹಣ್ಣಿನ ವಿಶೇಷತೆ ಅಂತಂದರೆ ತಮಿಳುನಾಡಿನ ಶಿವಗರಿ ಗ್ರಾಮದ ಶಿವನ ದೇವಸ್ಥಾನದಲ್ಲಿ ಇದೇ ತಿಂಗಳ 8ರಂದು ನಡೆದ ವಿಶೇಷ ಪೂಜೆ ನಡೆಯಿತು. ಆ ವೇಳೆ ನಿಂಬೆಹಣ್ಣು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಹರಾಜು ಹಾಕಲಾಯಿತು. ಆಗ ಭಕ್ತರು ಇಷ್ಟೊಂದು ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿದರು. ಹೀಗೆ ಖರೀದಿ ಂಆಡಿದ ನಿಂಬೆಹಣ್ಣನ್ನು ಮನೆಗೆ ತೆಗೆದುಕೊಂಡು ಹೋದರೆ ಒಳಿತಾಗುತ್ತದೆ ಎಂ-ದು ಅಲ್ಲಿನ ಭಕ್ತರು ನಂಬುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರತಾಪ್ ಸಿಂಹ ಬೈ ಬರ್ತ್ ರೈಟರ್ ಇರಬಹುದು, ನಾನು ಫೈಟರ್: ಗುಡುಗಿದ ಪ್ರದೀಪ್ ಈಶ್ವರ್ 

Published on: Mar 13, 2024 09:39 AM