Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಅನಂದ್ ಸಿಂಗ್ ಮಗಳ ಮದುವೆ ಆರತಕ್ಷತೆ ಸಮಾರಂಭ ರಾಜಮನೆತನದ ವೈಭವಗಳನ್ನು ನೆನಪಿಸುತ್ತದೆ!

ಸಚಿವ ಅನಂದ್ ಸಿಂಗ್ ಮಗಳ ಮದುವೆ ಆರತಕ್ಷತೆ ಸಮಾರಂಭ ರಾಜಮನೆತನದ ವೈಭವಗಳನ್ನು ನೆನಪಿಸುತ್ತದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 10, 2022 | 1:28 PM

ಸಚಿವರ ಸುಂದರ ಮಗಳು ವೈಷ್ಣವಿ ಸಿಂಗ್ ವಿವಾಹವು ರಾಜಸ್ತಾನದ ಯಶೋರಾಜ್ ಸಿಂಗ್ ಜಾಧೋನ್ ಹೆಸರಿನ ಸ್ಫುರದ್ರೂಪಿ ಯುವಕನೊಂದಿಗೆ ಡಿಸೆಂಬರ್ 5 ರಂದು ಜೈಪುರ ನಗರದ ಪಿಂಕ್ ಪ್ಯಾಲೇಸ್ ನಲ್ಲಿ ನಡೆದಿತ್ತು.

ಹೊಸಪೇಟೆ: ರಾಜಮನೆತನಗಳ ವೈಭವೋಪೇತ ವಿವಾಹ ಮಹೋತ್ಸವಗಳು ಹೇಗೆ ನಡೆಯುತ್ತಿದ್ದವು ಅಂತ ನಾವೆಲ್ಲ ಬರೀ ಓದಿದ್ದು ಮತ್ತು ಸಿನಿಮಾಗಳಲ್ಲಿ ನೋಡಿದ್ದಷ್ಟೇ. ಆದರೆ, ಸಚಿವ ಅನಂದ್ ಸಿಂಗ್ (Anand Singh) ಅವರು ಹೊಸಪೇಟೆಯಲ್ಲಿ ತಮ್ಮ ಮಗಳ ಆರತಕ್ಷತೆಯನ್ನು ನಡೆಸಿದ ಅದ್ದೂರಿತನ ನೋಡುತ್ತಿದ್ದರೆ ಗತವೈಭವದ ಮದುವೆಗಳು ನೆನಪಿಗೆ ಬರುತ್ತವೆ. ರಿಸಿಪ್ಷನ್ ಗಾಗಿ ವಿಜಯನಗರ ಸಾಮ್ರಾಜ್ಯದ ಕೋಟೆಯನ್ನು ಹೋಲುವ ಸೆಟ್ ನಿರ್ಮಿಸಲಾಗಿದೆ ಮತ್ತು ಅದಕ್ಕೆ ಪೂರಕವೆನಿಸುವ ಎಲ್ಲ ವ್ಯವಸ್ಥೆಗಳನ್ನು ವಿಡಿಯೋದಲ್ಲಿ ನೋಡಬಹುದು. ಸಚಿವರ ಸುಂದರ ಮಗಳು ವೈಷ್ಣವಿ ಸಿಂಗ್ (Vaishnavi Singh) ವಿವಾಹವು ರಾಜಸ್ತಾನದ ಯಶೋರಾಜ್ ಸಿಂಗ್ ಜಾಧೋನ್ (Yashoraj Singh Jadon) ಹೆಸರಿನ ಸ್ಫುರದ್ರೂಪಿ ಯುವಕನೊಂದಿಗೆ ಡಿಸೆಂಬರ್ 5 ರಂದು ಜೈಪುರ ನಗರದ ಪಿಂಕ್ ಪ್ಯಾಲೇಸ್ ನಲ್ಲಿ ನಡೆದಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ