5 ದಿನ ‘ಕಾವೇರಿ ಆರತಿ’: ಯಾವಾಗಿನಿಂದ? ಹೇಗೆ? ಎಲ್ಲಿ? ಇಲ್ಲಿದೆ ಮಾಹಿತಿ
ಮೈಸೂರು ದಸರಾ ಪ್ರಯುಕ್ತ ನಡೆಯುವ ಕಾವೇರಿ ಆರತಿ ಕುರಿತು ಸಚಿವ ಚೆಲುವರಾಯಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ. ನಾಳೆ ಆರತಿಯ ಉದ್ಘಾಟನೆ ನಡೆಯಲಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಸಲಹೆಯ ಮೇರೆಗೆ ಸಧ್ಯಕ್ಕೆ ಇರುವ ಜಾಗದಲ್ಲಿಯೇ ಆರತಿಯನ್ನು ನಡೆಸಲಿದ್ದೇವೆ. ಕೋರ್ಟ್ನಿಂದ ಸಲಹೆ ಬಂದ ಬಳಿಕ ನಿರ್ದಿಷ್ಠ ಜಾಗದ ತಯಾರಿ ಮಾಡಬೇಕೆಂದಿದ್ದೇವೆ ಎಂದರು.
ಮೈಸೂರು, ಸೆಪ್ಟೆಂಬರ್ 25 : ಮೈಸೂರಿನಲ್ಲಿ ನಡೆಯುತ್ತಿರುವ ನಾಡಹಬ್ಬ ದಸರಾದ ಪ್ರಯುಕ್ತವಾಗಿ ಕಾವೇರಿ ಆರತಿಯನ್ನುಆಯೋಜಿಸಲಾಗುತ್ತಿದೆ. ಈ ಕುರಿತು ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಕಾವೇರಿ ಆರತಿಗಾಗಿ ಯಾವುದೇ ತಯಾರಿಯಿಲ್ಲದೆ ಇರುವ ಜಾಗದಲ್ಲೇ ಮಾಡಬೇಕು ಎಂದುಕೊಂಡಿದ್ದೇವೆ. ನಾಳೆ (ಸೆ.26) ಡಿಸಿಎಂ ಡಿ.ಕೆ ಶಿವಕುಮಾರ್ ಇದಕ್ಕೆ ಚಾಲನೆ ನೀಡಿ, ಸತತ 5 ದಿನಗಳ ವರೆಗೆ ಆರತಿ ನೆರವೇರಿಸುವಂತೆ ಹೇಳಿದ್ದಾರೆ. ಕೋರ್ಟ್ ತೀರ್ಪಿನ ನಂತರ ಇದಕ್ಕೊಂದು ಶಾಶ್ವತ ಜಾಗವನ್ನು ಏರ್ಪಡಿಸುತ್ತೇವೆ. ನಾಳಿನ ಉದ್ಘಾಟನೆಗೆ ಶ್ರೀರಂಗಪಟ್ಟಣ, ಮಂಡ್ಯ, ಪಾಂಡುಪುರ ಜನರನ್ನು ನಾವು ವಿಶೇಷವಾಗಿ ಆಹ್ವಾನಿಸಿದ್ದೇವೆ. ಅದಾದ ನಂತರದ 5 ದಿನಗಳಲ್ಲಿ ಒಂದೊಂದು ತಾಲೂಕಿನವರೂ ಬರಬಹುದು ಎಂದಿದ್ದಾರೆ. ಈ ವೀಡಿಯೋ ನೋಡಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
