ಸುದ್ದಿಗೋಷ್ಠಿಯಲ್ಲಿ ಮಾತಾಡುವಾಗ ಅಡಚಣೆ ಮಾಡುತ್ತಿದ್ದ ಮುಸ್ಲಿಂ ಯುವಕನನ್ನು ಹೊರಹಾಕುವಂತೆ ಹೇಳಿದ ಗುಂಡೂರಾವ್
ಯುವಕ ಸುಮ್ಮನಾದ ನಂತರ ಮಾತು ಮುಂದುವರಿಸುವ ಸಚಿವ ಗುಂಡೂರಾವ್, ಸಾಮಾಜಿಕ ಜಾಲತಾಣಗಳಿಂದ ಅಶಾಂತಿ ಮತ್ತು ಗಲಭೆಗಳು ಹೆಚ್ಚುತ್ತಿವೆ, ಪ್ರಸ್ತುತ ಕಾನೂನುನಡಿ ಜಾಲತಾಣಗಳಲ್ಲಿ ಕೋಮುದ್ವೇಷ ಹರಡುವವರಿಗೆ ಎಫ್ಐಆರ್ ದಾಖಲಾದರೂ ಬೇಗ ಜಾಮೀನು ಸಿಕ್ಕುಬಿಡುತ್ತದೆ, ಹಾಗಾಗಿ ಕಾನೂನುನನ್ನು ಬದಲಾಯಿಸಬೇಕಿದೆ ಮತ್ತು ಹೊಸ ಕಾನೂನು ರೂಪಿಸಬೇಕಿದೆ ಎಂದು ಹೇಳಿದರು.
ಮಂಗಳೂರು, ಮೇ 31: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ನಡೆಸಿ ಮಾತಾಡುವಾಗ ಮುಸ್ಲಿಂ ಯುವಕನೊಬ್ಬ (Muslim youth) ಅವರ ಮಾತಿಗೆ ಅಡ್ಡಿಪಡಿಸುವ ಪ್ರಯತ್ನ ಮಾಡಿದ ಪ್ರಸಂಗ ನಡೆಯಿತು. ಮಿನಿಸ್ಟ್ರು ಹಿಂದೆಯೇ ನಿಂತಿದ್ದ ಕಾರಣ ಯುವಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿರಬಹುದು. ಯುವಕನ ಅಡಚಣೆಯಿಂದ ಸಿಡಿಮಿಡಿಗೊಳ್ಳುವ ಸಚಿವ ಮೊದಲಿಗೆ ಸುಮ್ಮನಿರುವಂತೆ ಗದರುತ್ತಾರೆ, ಯುವಕ ಮಾತಾಡುವುದು ಮುಂದುವರಿಸಿದಾಗ ತಾಳ್ಮೆ ಕಳೆದುಕೊಳ್ಳುವ ದಿನೇಶ್ ಗುಂಡೂರಾವ್ ಯುವಕನನ್ನು ಅಲ್ಲಿಂದ ಹೊರಗೆ ಹಾಕಿ ಎಂದು ಹೇಳುತ್ತಾರೆ. ಅವರ ಪಕ್ಕದಲ್ಲಿ ಕುಳಿತಿದ್ದ ಎಮ್ಎಲ್ಸಿ ಐವಾನ್ ಡಿಸೋಜಾ ಯುವಕನಿಗೆ ಸಮಾಧಾನ ಹೇಳುತ್ತಾರೆ.
ಇದನ್ನೂ ಓದಿ: ಮಂಗಳೂರು: ರಾಜೀನಾಮೆ ಹಿಂಪಡೆಯಲೊಪ್ಪದ ಕಾಂಗ್ರೆಸ್ ನಾಯಕರು, ಹಂತಕರು ಮತ್ತು ಪ್ರಚೋದಕರ ಬಂಧನದವರೆಗೆ ನಿರ್ಧಾರ ಬದಲಿಸಲ್ಲ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ