ಸದನದ ಕಲಾಪಕ್ಕೆ ತಡವಾಗಿ ಅಗಮಿಸಿದ ಡಾ ಅಶ್ವತ್ಥ್​ ನಾರಾಯಣ್​ರನ್ನು ಸಭಾಧ್ಯಕ್ಷರು ‘ಯಾಕೆ ತಡ’ ಅಂತ ಪ್ರಶ್ನಿಸಿದರು!

ಸದನದ ಕಲಾಪಕ್ಕೆ ತಡವಾಗಿ ಅಗಮಿಸಿದ ಡಾ ಅಶ್ವತ್ಥ್​ ನಾರಾಯಣ್​ರನ್ನು ಸಭಾಧ್ಯಕ್ಷರು ‘ಯಾಕೆ ತಡ’ ಅಂತ ಪ್ರಶ್ನಿಸಿದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Sep 15, 2022 | 1:17 PM

ಪ್ರಶ್ನೋತ್ತರ ಕಲಾಪ ನಡೆಯುವ ಸಂದರ್ಭದಲ್ಲಿ ಪ್ರತಿಯೊಬ್ಬ ಸಚಿವ ಸದನದಲ್ಲಿ ಹಾಜರಿರಬೇಕು, ಪ್ರಶ್ನೋತ್ತರ ಕಲಾಪಕ್ಕೆ ಅತಿ ಹೆಚ್ಚು ಆದ್ಯತೆ ಇರೋದರಿಂದ ಯಾರೂ ತಪ್ಪಿಸಬಾರದು ಮತ್ತು ಅನಾರೋಗ್ಯದ ಹೊರತು ಬೇರೆ ಕಾರಣಗಳಿಗೆ ಗೈರಾಗಕೂಡದು ಎಂದು ಸಭಾಧ್ಯಕ್ಷರು ತಾಕೀತು ಮಾಡಿದರು.

ಬೆಂಗಳೂರು: ವಿಧಾನ ಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಗುರುವಾರದಂದು ಸದನದ ಕಾರ್ಯಕಲಾಪಗಳಿಗೆ ತಡವಾಗಿ ಆಗಮಿಸಿದ ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಸಿ ಎನ್ ಅಶ್ವತ್ಥ್​ ನಾರಾಯಣ್ (Dr CN Ashwath Narayan) ಅವರನ್ನು ನಯವಾಗೇ ತರಾಟೆಗೆ ತೆಗೆದುಕೊಂಡರು. ಸದನದಲ್ಲಿ ಪ್ರಶ್ನೋತ್ತರ ಕಲಾಪ (Question Hour) ನಡೆಯುವ ಸಂದರ್ಭದಲ್ಲಿ ಪ್ರತಿಯೊಬ್ಬ ಸಚಿವ ಸದನದಲ್ಲಿ ಹಾಜರಿರಬೇಕು, ಪ್ರಶ್ನೋತ್ತರ ಕಲಾಪಕ್ಕೆ ಅತಿ ಹೆಚ್ಚು ಆದ್ಯತೆ ಇರೋದರಿಂದ ಯಾರೂ ತಪ್ಪಿಸಬಾರದು ಮತ್ತು ಅನಾರೋಗ್ಯದ ಹೊರತು ಬೇರೆ ಕಾರಣಗಳಿಗೆ ಗೈರಾಗಕೂಡದು ಎಂದು ಸಭಾಧ್ಯಕ್ಷರು ತಾಕೀತು ಮಾಡಿದರು.

Published on: Sep 15, 2022 01:14 PM