ಯಲಹಂಕ ಉಪವಲಯದದಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳುತ್ತಿಲ್ಲ!

ಯಲಹಂಕ ಉಪವಲಯದದಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳುತ್ತಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 15, 2022 | 2:00 PM

ಕಂಪೌಂಡ್ ಪಕ್ಕದಲ್ಲೇ ರಾಜಾಕಾಲುವೆ ಇದ್ದರೂ ಬಿಬಿಎಮ್ ಪಿ ಸಿಬ್ಬಂದಿ ಅದನ್ನು ಕೆಡವದೆ ಕಾರ್ಯಾಚರಣೆ ನಡೆಸುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ.

ಬೆಂಗಳೂರಿನ ಯಲಹಂಕ ಉಪವಲಯದಲ್ಲಿ (Yelahanka sub-division) ಬಿಬಿಎಮ್ ಪಿಯಿಂದ (BBMP) ಒತ್ತುವರಿ ಕಾರ್ಯಾಚರಣೆ ನಡೆಯುತ್ತಿದೆಯಾದರೂ ಅದು ಮಂದಗತಿಯಲ್ಲಿ ಸಾಗುತ್ತಿದೆ. ವಿಡಿಯೋನಲ್ಲಿ ನಿಮಗೆ ಕಾಣುತ್ತಿರೋದು ಯಲಹಂಕದ ಸಿಂಗಪೂರ ಪ್ರದೇಶ. ಲ್ಯಾಂಡ್ ಮಾರ್ಕ್ ಹೆಸರಿನ ಅಪಾರ್ಟ್ ಮೆಂಟ್ ಮಾಲೀಕ ಸುಮಾರು 100 ಮೀಟರ್ ಉದ್ದದ ರಾಜಾಕಾಲುವೆ (SWD) ಮೇಲಿನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವು ಮಾಡಲಾಗುತ್ತಿದೆ. ಕಂಪೌಂಡ್ ಪಕ್ಕದಲ್ಲೇ ರಾಜಾಕಾಲುವೆ ಇದ್ದರೂ ಬಿಬಿಎಮ್ ಪಿ ಸಿಬ್ಬಂದಿ ಅದನ್ನು ಕೆಡವದೆ ಕಾರ್ಯಾಚರಣೆ ನಡೆಸುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ.