ಕ್ಷೇತ್ರದ ದುಸ್ಥಿತಿಗೆ ಶಾಸಕ ಅರವಿಂದ ಲಿಂಬಾವಳಿಯನ್ನು ದೂಷಿಸುತ್ತಿರುವ ಮಹದೇವಪುರ ನಿವಾಸಿಗಳು

ಹಿರಿಯ ವ್ಯಕ್ತಿಯೊಬ್ಬರು ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿಯವರನ್ನು ನೇರವಾಗಿ ಹಳಿಯುತ್ತಿದ್ದಾರೆ. ಮಹದೇವಪುರದಲ್ಲಿ ರಾಜಾಕಾಲುವೆ ಮತ್ತು ಚರಂಡಿಗಳ ಕಳಪೆ ಕಾಮಗಾರಿಗಾಗಿಯೂ ಅವರನ್ನು ಶಾಸಕರನ್ನು ದೂಷಿಸುತ್ತಿದ್ದಾರೆ.

TV9kannada Web Team

| Edited By: Arun Belly

Sep 15, 2022 | 12:12 PM

ಬೆಂಗಳೂರು: ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಮ್ ಪಿ ಅಧಿಕಾರಿಗಳು (BBMP officials) ಆರಂಭಿಸಿದ ಬಳಿಕ ಪ್ರತಿದಿನ ಭೂಮಾಲೀಕರು (land owners) ಮತ್ತು ಮನೆ ಮಾಲೀಕರೊಂದಿಗೆ ಜಗಳ ಮಾಡಬೇಕಾಗಿರುವ ಪ್ರಸಂಗ ಅವರಿಗೆ ಎದುರಾಗುತ್ತಿದೆ. ಮಹದೇವಪುರ ಮತಕ್ಷೇತ್ರದಲ್ಲಿ ಸಾರ್ವಜನಿಕರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿರುವುದನ್ನು ವಿಡಿಯೋನಲ್ಲಿ ನೋಡಬಹುದು. ಹಿರಿಯ ವ್ಯಕ್ತಿಯೊಬ್ಬರು ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿಯವರನ್ನು (Arvind Limbavali) ನೇರವಾಗಿ ಹಳಿಯುತ್ತಿದ್ದಾರೆ. ಮಹದೇವಪುರದಲ್ಲಿ ರಾಜಾಕಾಲುವೆ ಮತ್ತು ಚರಂಡಿಗಳ ಕಳಪೆ ಕಾಮಗಾರಿಗಾಗಿಯೂ ಅವರನ್ನು ಶಾಸಕರನ್ನು ದೂಷಿಸುತ್ತಿದ್ದಾರೆ.

Follow us on

Click on your DTH Provider to Add TV9 Kannada