ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ವಾರ್ಷಿಕೋತ್ಸವ, ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಮಹಾನಗರದ ಕೆ ಅರ್ ವೃತ್ತದಲ್ಲಿರುವ ಸರ್ ಎಮ್ ವಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಬೆಂಗಳೂರು: ಭಾರತ ರತ್ನ ಸರ್ ಎಮ್ ವಿಶ್ವೇಶ್ವರಯ್ಯ (Sir M Visvesvaraya) ಅವರ ಜನ್ಮ ವಾರ್ಷಿಕೋತ್ಸವದ ದಿನವಾಗಿರುವ ಇಂದು (ಸೆಪ್ಟೆಂಬರ್ 15) ನಾಡಿನೆಲ್ಲೆಡೆ ಇಂಜಿನೀಯರ್ಸ್ ಡೇ (Engineer’s Day) ಆಗಿ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಬೆಂಗಳೂರು ಮಹಾನಗರದ ಕೆ ಅರ್ ವೃತ್ತದಲ್ಲಿರುವ ಸರ್ ಎಮ್ ವಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಚಿವರಾದ ಗೋವಿಂದ ಕಾರಜೋಳ ಮತ್ತು ಆನಂದ್ ಸಿಂಗ್ ಸ್ಥಳದಲ್ಲಿ ಉಪಸ್ಥಿತರಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತಾಡಿ ಮುಖ್ಯಮಂತ್ರಿಗಳು ಸರ್ ಎಮ್ ವಿ ಅವರ ಸಾರ್ಥಕ ಬದುಕು ಮತ್ತು ನಾಡಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.
Published on: Sep 15, 2022 11:02 AM
Latest Videos