ಸಚಿವ ಕೆಎಸ್ ಈಶ್ವರಪ್ಪ ನಿರ್ಗಮನ, ರಾಜ್ಯ ಬಿಜೆಪಿಯಲ್ಲಿ ಮುಂದಿನ ಪರ್ವ ಏನು? ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

| Updated By: ಸಾಧು ಶ್ರೀನಾಥ್​

Updated on: Apr 15, 2022 | 3:39 PM

TV9 Kannada Digital Live: ನಾನಾ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಅನ್ನುತ್ತಿದ್ದಾರೆ ವಿರೋಧ ಪಕ್ಷದ ನಾಯಕರು. ಹಾಗಾದರೆ ಹುತ್ತದಲ್ಲಿ ಹಾವುಗಳು ಇನ್ನೂ ಎಷ್ಟೂಅಂತಾ ಹೊರಬರಲಿವೆ? ಇದನ್ನೆಲ್ಲಾ ಒಟ್ಟಿಗೆ ನೋಡುವುದಾದರೆ ಚುನಾವಣೆಗೂ ಮುನ್ನ ರಾಜ್ಯ ರಾಜಕೀಯದಲ್ಲಿ ಏನೆಲ್ಲ ಸಂಚಲನಗಳು ಸೃಷ್ಟಿಯಾಗಬಹುದು? ಎಂಬ ಕುತೂಹಲ ಗರಿಗೆದರಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಂಕರ್ ಚಂದ್ರಮೋಹನ್ ಇಂದು ಟಿವಿ9 ಡಿಜಿಟಲ್ ಲೈವ್ ಚರ್ಚೆಯನ್ನು 3:30 ಕ್ಕೆ ನಡೆಸಿಕೊಡಲಿದ್ದಾರೆ. ಭಾಗವಹಿಸಿ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆ (KS Eshwarappa Resignation) ನಂತರ ರಾಜ್ಯ ರಾಜಕೀಯದಲ್ಲಿ ಏನೆಲ್ಲಾ ಬೆಳವಣಿಗೆ ಆಗುತ್ತಿದೆ ಮತ್ತು ಇನ್ನು ಮುಂದೆ.. ಯಾವ ರೀತಿಯ ಬೆಳವಣಿಗೆ ಆಗಬಹುದು? ಸೂಕ್ತ ತನಿಖೆ ಆದರೆ ಇನ್ನೂ ನಾಲ್ವರು ಸಚಿವರು ರಾಜೀನಾಮೆ ಕೊಡಬೇಕಾಗುತ್ತೆ ಅನ್ನುತ್ತಾರೆ ಕಾಂಗ್ರೆಸ್​ ಶಾಸಕ ಪ್ರಿಯಾಂಕ್ ಖರ್ಗೆ. ಈ ಮಧ್ಯೆ ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಗಳು, ನಾನಾ ಅನಿಸಿಕೆ- ಅಭಿಪ್ರಾಯಗಳು ಜೋರಾಗಿ ಕೇಳಿಬರುತ್ತಿವೆ.

ನಾನಾ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಅನ್ನುತ್ತಿದ್ದಾರೆ ವಿರೋಧ ಪಕ್ಷದ ನಾಯಕರು. ಹಾಗಾದರೆ ಹುತ್ತದಲ್ಲಿ ಹಾವುಗಳು ಇನ್ನೂ ಎಷ್ಟೂಅಂತಾ ಹೊರಬರಲಿವೆ? ಇದನ್ನೆಲ್ಲಾ ಒಟ್ಟಿಗೆ ನೋಡುವುದಾದರೆ ಚುನಾವಣೆಗೂ ಮುನ್ನ ರಾಜ್ಯ ರಾಜಕೀಯದಲ್ಲಿ (Karnataka BJP) ಏನೆಲ್ಲ ಸಂಚಲನಗಳು ಸೃಷ್ಟಿಯಾಗಬಹುದು? ಎಂಬ ಕುತೂಹಲ ಗರಿಗೆದರಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಶ್ವರಪ್ಪ ಆಯ್ತು, ಮುಂದೆ ಯಾರು? ಎಂಬ ವಿಚಾರವಾಗಿ ಆಂಕರ್ ಚಂದ್ರಮೋಹನ್ ಇಂದು ಟಿವಿ9 ಡಿಜಿಟಲ್ ಲೈವ್ ಚರ್ಚೆಯನ್ನು 3:30 ಕ್ಕೆ ನಡೆಸಿಕೊಡಲಿದ್ದಾರೆ, ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ (TV9 Kannada Digital Live).

ಇದೂ ಓದಿ:
ಕೋಮು ಸಾಮರಸ್ಯ ಕದಡಲು ಪೊಲೀಸ್​ ವೈಫಲ್ಯ ಕಾರಣವಾ? ಪೊಲೀಸರು ತಡವಾಗಿ ಎಚ್ಚೆತ್ತರಾ? ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

ಇದೂ ಓದಿ:
ಸಚಿವ ಮುರುಗೇಶ್ ನಿರಾಣಿ ಭೇಟಿ ಬಳಿಕ ಮೃದುವಾದ ಸಂತೋಷ್ ಕುಟುಂಬಸ್ಥರು, ಸಂತೋಷ್ ಸಾವು ವಿಧಿಲಿಖಿತ ಎಂದ ಸೋದರ ಪ್ರಶಾಂತ್