ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ ಆಘಾತದಿಂದ ಚೇತರಿಸಿಕೊಳ್ಳದ ತಂದೆತಾಯಿಗೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

|

Updated on: Apr 20, 2024 | 12:55 PM

ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಗಳ ಬಗ್ಗೆ ಹುಬ್ಳಳ್ಳಿಯಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗಿರುವಾಗಲೇ ಸಚಿವೆ ಲಕ್ಷ್ಮಿಯವರು ನಿರಂಜನ ಮನೆಗೆ ಭೇಟಿ ನೀಡಿದ್ದಾರೆ. ನಿರಂಜನ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದು ಹುಬ್ಳಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೌನ್ಸಿಲರ್ ಆಗಿದ್ದಾರೆ.

ಹುಬ್ಳಳ್ಳಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಇಂದು ನಿರಂಜನ ಹಿರೇಮಠ (Niranjan Hiremath) ಅವರ ಮನೆಗೆ ತೆರಳಿ ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಅವರೊಂದಿಗೆ ಸ್ವಲ್ಪ ಸಮಯ ಕಳೆದರು. ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ (Neha Hiremath) ಗುರುವಾರ ತನ್ನ ಕಾಲೇಜು ಆವರಣದಲ್ಲಿ ಫಯಾಜ್ ಹೆಸರಿನ ಯುವಕನಿಂದ ಹಲವಾರು ಬಾರಿ ಭೀಕರವಾಗಿ ಇರಿತಕ್ಕೊಳಗಾಗಿ ಹತ್ಯೆಯಾದಳು. ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಗಳ ಬಗ್ಗೆ ಹುಬ್ಳಳ್ಳಿಯಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗಿರುವಾಗಲೇ ಸಚಿವೆ ಲಕ್ಷ್ಮಿಯವರು ನಿರಂಜನ ಮನೆಗೆ ಭೇಟಿ ನೀಡಿದ್ದಾರೆ. ನಿರಂಜನ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದು ಹುಬ್ಳಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೌನ್ಸಿಲರ್ ಆಗಿದ್ದಾರೆ. ಅವರು ಮತ್ತು ನೇಹಾ ತಾಯಿ ಇನ್ನೂ ಆಘಾತದಲ್ಲಿದ್ದಾರೆ. ನಿರಂಜನ ದುಃಖ ತಡೆಯಲಾಗದೆ ಈಗಲೂ ಚಿಕ್ಕಮಕ್ಳಳಂತೆ ಅಳುತ್ತಿದ್ದಾರೆ. ಅವರ ಪತ್ನಿ ಸಚಿವೆಗೆ ಮಗಳ ಬಗ್ಗೆ, ಆಕೆಯ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಇಟ್ಟುಕೊಂಡಿದ್ದ ಕನಸುಗಳನ್ನು ತಿಳಿಸಿದರು. ಟಿವಿ9 ಹುಬ್ಬಳ್ಳಿ ವರದಿಗಾರನೊಂದಿಗೆ ಮಾತಾಡಿರುವ ನೇಹಾಳ ತಾಯಿ, ಫಯಾಜ್ ನನ್ನು ಗಲ್ಲಿಗೇರಿಸಬೇಕು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನೇಹಾ ಹಿರೇಮಠ ಪ್ರಕರಣ: ಅಪರಾಧಿಯನ್ನು ಎನ್ಕೌಂಟರ್ ಮಾಡುವ ಕಾನೂನು ತರುವ ಬಗ್ಗೆ ಸರ್ಕಾರಗಳು ಯೋಚಿಸಬೇಕು: ಸಂತೋಷ್ ಲಾಡ್