ಇಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಬಿಜೆಪಿ ಸಮಾವೇಶಕ್ಕೆ ಫೂಲ್ ಪ್ರೂಫ್ ಭದ್ರತೆ

ಇಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಬಿಜೆಪಿ ಸಮಾವೇಶಕ್ಕೆ ಫೂಲ್ ಪ್ರೂಫ್ ಭದ್ರತೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 20, 2024 | 11:35 AM

ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ, ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಸಾರ್ವಜನಿಕರಿಗೆ ಉತ್ತರ ಭಾಗದ ದ್ವಾರದ ಮೂಲಕ ಪ್ರವೇಶ ಕಲ್ಪಿಸಲಾಗಿದ್ದು, ಗಣ್ಯರು ಮತ್ತು ಮಾಧ್ಯಮದವರು ದಕ್ಷಿಣ ದಿಕ್ಕಿನ ಗೇಟ್ ಮೂಲಕ ಒಳಗೆ ಬರಬೇಕು ಎಂದು ಹೇಳುತ್ತಾರೆ.

ಚಿಕ್ಕಬಳ್ಳಾಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಇಂದು ಪುನಃ ರಾಜ್ಯಕ್ಕೆ ಆಗಮಿಸಲಿದ್ದು ಚಿಕ್ಕಬಳ್ಳಪುರದಲ್ಲಿ ಒಂದು ಬೃಹತ್ ಬಿಜೆಪಿ ಸಮಾವೇಶವನ್ನು (BJP convention) ಉದ್ದೇಶಿಸಿ ಮಾತಾಡುತ್ತಾ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗಾಗಿ ಮತ ಯಾಚಿಸಲಿದ್ದಾರೆ. ದೇವನಹಳ್ಳಿಯ ಹೊರವಲಯದಲ್ಲಿ ಸಿದ್ಧಪಡಿಸಲಾಗಿರುವ ವೇದಿಕೆ ಸುತ್ತಮುತ್ತ ಹಲವು ಸುತ್ತ್ತಿನ ಬಿಗಿ ಭದ್ರತಾ ವ್ಯವಸ್ಥೆ (tight security arrangements) ಮಾಡಲಾಗಿದ್ದು, ಚಿಕ್ಕಬಳ್ಳಾಪುರದ ಟಿವಿ9 ವರದಿಗಾರ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ ಮತ್ತು ಚಿಕ್ಕಬಳ್ಳಾಪುರದ ಪೊಲೀಸ್ ವರಿಷ್ಠಾಧಿಕಾರಿ ಬಿಎಲ್ ನಾಗೇಶ್ ಅವರೊಂದಿಗೆ ಮಾತುಕತೆಯೂ ನಡೆಸಿದ್ದಾರೆ. ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ, ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಸಾರ್ವಜನಿಕರಿಗೆ ಉತ್ತರ ಭಾಗದ ದ್ವಾರದ ಮೂಲಕ ಪ್ರವೇಶ ಕಲ್ಪಿಸಲಾಗಿದ್ದು, ಗಣ್ಯರು ಮತ್ತು ಮಾಧ್ಯಮದವರು ದಕ್ಷಿಣ ದಿಕ್ಕಿನ ಗೇಟ್ ಮೂಲಕ ಒಳಗೆ ಬರಬೇಕು ಎಂದು ಹೇಳುತ್ತಾರೆ.

ಪ್ರಧಾನಿಯವರ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಸಕಲ ಭದ್ರತಾ ಏರ್ಪಾಟುಗಳನ್ನು ಮಾಡಲಾಗಿದೆ, ಮಾಧ್ಯಮದವರನ್ನು ಹೊರತು ಪಡಿಸಿ ಬೇರೆ ಯಾರೇ ಆಗಲಿ ತಮ್ಮ ಮೊಬೈಲ್ ಫೋನ್ ಬಿಟ್ಟು ಯಾವುದೇ ವಸ್ತುವನ್ನು ಒಳಗೆ ತೆಗೆದುಕೊಂಡು ಹೋಗುವಂತಿಲ್ಲ ಎಂದು ಹೇಳುವ ನಾಗೇಶ್ ಸುಮಾರು 1,500 ಜನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಡ್ಯದಲ್ಲಿ ಸುಮಲತಾ ಪ್ರಚಾರದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ