Union Budget 2025: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆಗಳನ್ನು ಕಮ್ಮಿ ಮಾಡಬೇಕು: ಬೆಂಗಳೂರು ಗೃಹಿಣಿ
Union Budget 2025: ಮತ್ತೊಬ್ಬ ಮಹಿಳೆ ಮೊದಲು ನೌಕರಿ ಮಾಡುತ್ತಿದ್ದರೂ ಈಗ ಪೂರ್ಣಪ್ರಮಾಣದ ಗೃಹಿಣಿಯಾಗಿದ್ದಾರೆ. ಇವರು ಕೂಡ ಶಾಲಾ ಫೀಸು ಬಗ್ಗೆ ಮಾತಾಡುತ್ತಾರೆ. ಮನೆ ನಡೆಸುವ ಗೃಹಿಣಿಯರಿಗೆ ಅರ್ಥಿಕವಾಗಿ ಸ್ವಾವಲಂಬಿಗಳಾಗಲು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೋಜನೆಗಳನ್ನು ರೂಪಿಸಿ ಸಬ್ಸಿಡಿಗಳನ್ನು ನೀಡಬೇಕೆಂದು ಹೇಳುತ್ತಾರೆ. ರಸ್ತೆಗಳು ಮತ್ತು ಮಹಿಳಾ ಸುರಕ್ಷತೆಯ ಬಗ್ಗೆಯೂ ಇವರು ಮಾತಾಡುತ್ತಾರೆ.
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ 2025-2026 ಸಾಲಿನ ಬಜೆಟ್ ಮಂಡಿಸಲಿದ್ದಾರೆ. ನಗರದ ಗೃಹಿಣಿಯರು ಸಚಿವೆಯಿಂದ ಯಾವ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ, ಅವರ ಬೇಡಿಕೆಗಳೇನು ಎಂದು ಅರಿಯುವ ಪ್ರಯತ್ನ ಟಿವಿ9 ಮಾಡಿದೆ. ನಮ್ಮ ಪ್ರತಿನಿಧಿಯೊಂದಿಗೆ ಒಬ್ಬ ಸರ್ಕಾರೀ ಉದ್ಯೋಗಿ ಮಾತಾಡಿ, ಮಧ್ಯಮ ವರ್ಗದವರು ಬದುಕು ನಿರ್ವಹಣೆಗಾಗಿ ಒದ್ದಾಡುತ್ತಿದ್ದಾರೆ, ಶಾಲಾ ಫೀಸುಗಳನ್ನು ಪಾವತಿಸಲಾಗುತ್ತಿಲ್ಲ, ಮಕ್ಕಳ ಶಾಲೆ ಬಿಡಿಸಿ ಮನೆಯಲ್ಲಿ ಕೂರಿಸಿದ್ದೇನೆ, ಅಗತ್ಯ ವಸ್ತುಗಳ ಬೆಲೆ ಕೈಗೆ ನಿಲುಕದಂತಾಗಿದೆ, ₹ 12,000 ತೆರಿಗೆ ಪಾವತಿಸುತ್ತಿದ್ದೇನೆ, ನಿರ್ಮಲಾ ಸೀತಾರಾಮನ್ ಅವರು ತೆರಿಗೆ ಕಡಿಮೆ ಮಾಡಬೇಕು ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Union Budget 2025: ನಾಳಿನ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಬೇಡಿಕೆಗಳೇನು? ಇಲ್ಲಿದೆ ಪಟ್ಟಿ