ಫೈಟರ್ ರವಿ ಬಿಜೆಪಿ ಸೇರಿದ್ದಾನಾ? ನಂಗೆ ಗೊತ್ತೇ ಇಲ್ಲ!: ಆರ್ ಅಶೋಕ, ಕಂದಾಯ ಸಚಿವ
ಒಂದು ಪಕ್ಷ ಅವನು ಸೇರಿದ್ದೇ ನಿಜವಾದರೆ ಅದನ್ನು ಪಕ್ಷದ ರಾಜ್ಯಾಧ್ಯಕ್ಷರ ಗಮನಕ್ಕೆ ತರುವುದಾಗಿ ಹೇಳಿದ ಸಚಿವರು ರಾಜ್ಯಾಧ್ಯಕ್ಷರೇ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಬೆಂಗಳೂರು: ರೌಡಿ ಶೀಟರ್ ಗಳು ಮತ್ತು ಕೊಲೆ ಆರೋಪದಲ್ಲಿ ಜೈಲು ಸೇರಿ ಹೊರಬಂದವರ ಜೊತೆ ಬಿಜೆಪಿ ನಾಯಕರು ಕಾಣಿಸಿಕೊಳ್ಳುತ್ತಾರೆ. ಪಕ್ಷದ ಕೆಲ ನಾಯಕರಲ್ಲಿ ಕೆಲವರು ಅದನ್ನು ಸಮರ್ಥಿಸಿಕೊಳ್ಳುತ್ತಾರೆ ಮತ್ತು ಬೇರೆಯವರು ತಮಗೇನೂ ಗೊತ್ತಿಲ್ಲ ಅಂತ ಹೇಳಿ ಜಾರಿಕೊಳ್ಳುತ್ತಾರೆ. ಬೆಂಗಳೂರಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಕಂದಾಯ ಸಚಿವ ಆರ್ ಅಶೋಕ (R Ashoka) ಅವರು , ಫೈಟರ್ ರವಿ (Fighter Ravi) ಹೆಸರಿನ ಗೂಂಡಾ ಪಕ್ಷಕ್ಕೆ ಸೇರಿರುವುದು ತನಗೆ ಗೊತ್ತೇ ಇಲ್ಲ ಎಂದು ಹೇಳಿದರು. ಒಂದು ಪಕ್ಷ ಅವನು ಸೇರಿದ್ದೇ ನಿಜವಾದರೆ ಅದನ್ನು ಪಕ್ಷದ ರಾಜ್ಯಾಧ್ಯಕ್ಷರ (state president) ಗಮನಕ್ಕೆ ತರುವುದಾಗಿ ಹೇಳಿದ ಸಚಿವರು ರಾಜ್ಯಾಧ್ಯಕ್ಷರೇ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ