ಸತೀಶ್​​ ಜಾರಕಿಹೊಳಿ ಸಚಿವರಾಗುತ್ತಿದ್ದಂತೆ ಅಭಿಮಾನಿಗಳು ಫುಲ್​ ಖುಷ್​​, ಬೆಳಗಾವಿಯಲ್ಲಿ ಸಂಭ್ರಮಾಚರಣೆ

|

Updated on: May 22, 2023 | 10:05 AM

ಎರಡು ವರ್ಷಗಳ ಬಳಿಕ ಮತ್ತೆ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ಒಲಿದಿದ್ದು, ಜಿಲ್ಲೆಯ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಬೆಳಗಾವಿ: ಎರಡು ವರ್ಷಗಳ ಬಳಿಕ ಮತ್ತೆ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ಒಲಿದಿದ್ದು, ಜಿಲ್ಲೆಯ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ‘ನಮ್ಮ ಕುಟುಂಬದಲ್ಲಿ ಮತ್ತೆ ರಾಜ್ಯದ ಮಂತ್ರಿ’ ಎಂಬ ಶೀರ್ಷಿಕೆಯ ವಿಡಿಯೋ ವೈರಲ್ ಆಗುತ್ತಿದೆ. ‘ಯಾವ ಸರ್ಕಾರ ರಚನೆಯಾದರೂ ಸಾಹುಕಾರ್ ಜಾರಕಿಹೊಳಿ ಕುಟುಂಬದ ಹೆಸರು ಪ್ರಮಾಣ ವಚನ ಪಟ್ಟಿಯಲ್ಲಿ ಇದ್ದೇ ಇರುತ್ತೆ’. ‘ದ್ಯಾಟ್ ಇಸ್ ಕಿಂಗ್ ಮೇಕರ್ ಫ್ಯಾಮಿಲಿ’ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.

2004ರಿಂದ ಯಾವುದೇ ಸರ್ಕಾರ ಇದ್ದರೂ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ಫಿಕ್ಸ್ ಎಂಬಂತಿತ್ತು. 2004ರಲ್ಲಿ ಪ್ರಥಮ ಬಾರಿಗೆ ಜಾರಕಿಹೊಳಿ ಕುಟುಂಬದಿಂದ ಸಚಿವರಾಗಿ ಸತೀಶ್ ಜಾರಕಿಹೊಳಿ ಆಯ್ಕೆಯಾಗಿದ್ದರು. ನಂತರ 17 ವರ್ಷಗಳ ಕಾಲ ಯಾವುದೇ ಸರ್ಕಾರ ಬಂದರೂ ಜಾರಕಿಹೊಳಿ ಸಹೋದರರ ಪೈಕಿ ಓರ್ವರು ಮಂತ್ರಿ ಆಗುತ್ತಿದ್ದರು.

2021ರ ಮಾರ್ಚ್ 3ರಂದು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. 2021ರಿಂದ ಜಾರಕಿಹೊಳಿ ಕುಟುಂಬದಲ್ಲಿ ಯಾರೂ ಸಚಿವರಿರಲಿಲ್ಲ. ಈಗ ಮತ್ತೆ ಕಾಂಗ್ರೆಸ್ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ಮಂತ್ರಿಯಾಗಿದ್ದಾರೆ.

ಜಾರಕಿಹೊಳಿ ಬ್ರದರ್ಸ್​​

ಐವರು ಜಾರಕಿಹೊಳಿ ಸಹೋದರರ ಪೈಕಿ ನಾಲ್ವರು ರಾಜಕೀಯದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿದ್ದು, ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ. ಲಖನ್ ಜಾರಕಿಹೊಳಿ ಪಕ್ಷೇತರ ಎಂಎಲ್‌ಸಿಯಾಗಿದ್ದಾರೆ.

Published on: May 21, 2023 10:53 AM