ಸಿನಿಮಾ ಬಗ್ಗೆ ಮಾತನಾಡುತ್ತಾ ಸಿಸಿಬಿ ವಿಚಾರಣೆ ನೆನಪು ಮಾಡಿಕೊಂಡ ದಿಗಂತ್: ಕಾರಣ?
Diganth: ವಿ ರವಿಚಂದ್ರನ್ ಜೊತೆಗೆ ಜಡ್ಜ್ಮೆಂಟ್ ಡೇ ಸಿನಿಮಾದಲ್ಲಿ ದಿಗಂತ್ ನಟಿಸುತ್ತಿದ್ದು ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಸಿಸಿಬಿ ವಿಚಾರಣೆ ನೆನಪಿಸಿಕೊಂಡು ತಮಾಷೆ ಮಾಡಿದರು.
ನಟ ದಿಗಂತ್ (Diganth), ಜಡ್ಜ್ಮೆಂಟ್ ಡೇ (Judgment Day) ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಿನಿಮಾದಲ್ಲಿ ತಮ್ಮ ಪಾತ್ರಕ್ಕೂ ನಿಜ ಜೀವನಕ್ಕೂ ತುಸು ಸಾಮ್ಯತೆ ಇದೆ ಎಂದು ತಮಾಷೆ ಮಾಡಿದ ದಿಗಂತ್, ನಿಜ ಜೀವನದ ಮಾದರಿಯಲ್ಲಿಯೇ ತಪ್ಪು ಮಾಡದಿದ್ದರೂ ಸಿಕ್ಕಿಕೊಂಡು ಕಷ್ಟಗಳನ್ನು ಅನುಭವಿಸುತ್ತೇನೆ ಎನ್ನುತ್ತಾ ಸಿಸಿಬಿ ವಿಚಾರಣೆಗೆ ಕರೆದಿದ್ದರ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. ಈ ವಿಷಯವಾಗಿ ಏನು ಹೇಳಿದರು ದಿಗಂತ್? ವಿಡಿಯೋ ನೋಡಿ…
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:49 pm, Sat, 20 May 23