ಧಾರವಾಡ: ಸಾವಿಗೆ ಶರಣಾದ ರೈತರ ಮನೆಗಳಿಗೆ ತೆರಳಿ ಕುಟುಂಬಗಳಿಗೆ ಸಾಂತ್ವನ ಹೇಳಿದ ಸಂತೋಷ್ ಲಾಡ್
ಬರದ್ವಾಡ ಗ್ರಾಮದಲ್ಲಿ 56-ವರ್ಷದವರಾಗಿದ್ದ ಬಸನಗೌಡ ಪಾಟೀಲ್ ಮತ್ತು 42 ವರ್ಷ ವಯಸ್ಸಿನ ರವಿರಾಜ್ ಜಾಡರ್ ಎನ್ನುವವರು ನೇಣಿಗೆ ಶರಣಗಾಗಿದ್ದಾರೆ. ಮಳೆ ಚೆನ್ನಾಗಿ ಅಗುತ್ತಿದ್ದು ರೈತರು ಸಂತಸದಿಂದ್ದಾರೆ ಎಂದು ಸರ್ಕಾರ ಹೇಳುತ್ತಿರೋದು ಒಂದೆಡೆಯಾದರೆ ಮತ್ತೊಂದೆಡೆ ಅನ್ನದಾತರು ಸಾಲಭಾದೆಯಿಂದ ಸಾವಿಗೆ ಶರಣಾಗುವುದು ಮುಂದುವರಿದಿದೆ. ಬಾಯಿಮಾತಿನ ಸಮಾಧಾನ ಹೇಳದೆ ಸಚಿವ ಲಾಡ್ ಶೋಕತಪ್ತರ ಮನೆಗಳಿಗೆ ಹೋಗಿ ಸಾಂತ್ವನ ಹೇಳುತ್ತಿರೋದು ಉತ್ತಮ ಕೆಲಸ.
ಧಾರವಾಡ, ಜುಲೈ 14: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh Lad ), ಸಾಲಭಾದೆಯಿಂದ ನರಳಿ ಕೊನೆಗೆ ಆತ್ಮಹತ್ಯೆಗೆ ಶರಣಾಗಿರುವ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ಇಬ್ಬರು ರೈತರ ಮನೆಗಳಿಗೆ ಭೇಟಿ ನೀಡಿ ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಎರಡೂ ಕುಟುಂಬಗಳಿಗೆ ತಮ್ಮ ಸಂತೋಷ್ ಲಾಡ್ ಪ್ರತಿಷ್ಠಾನದಿಂದ ಸಚಿವ ತಲಾ ಎರಡೂವರೆ ಲಕ್ಷ ರೂ. ಗ ಚೆಕ್ ನೀಡುವಂತೆ ಅವರು ತಮ್ಮ ಆಪ್ತ ಕಾರ್ಯದರ್ಶಿಗೆ ಫೋನ್ ಮಾಡಿ ಹೇಳಿದರಲ್ಲದೆ ರೈತರು ತೆಗೆದುಕೊಂಡಿರುವ ಸಾಲವನ್ನು ತಾವ ಭರಿಸುವ ಭರವಸೆಯನ್ನು ಕುಟುಂಬಗಳಿಗೆ ನೀಡಿದರು.
ಇದನ್ನೂ ಓದಿ: ನಾನು ಹೀರೋ ಆಗಬೇಕಿತ್ತು, ನಿರ್ಮಾಪಕ ಆಗಿಬಿಟ್ಟೆ: ಸಂತೋಷ್ ಲಾಡ್
ವಿಡಿಯೋ ಸುದ್ದಿಗಳಿಗಾಗು ಕ್ಲಿಕ್ ಮಾಡಿ