AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಹೀರೋ ಆಗಬೇಕಿತ್ತು, ನಿರ್ಮಾಪಕ ಆಗಿಬಿಟ್ಟೆ: ಸಂತೋಷ್ ಲಾಡ್

Santhosh Lad: 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವವು ನಿನ್ನೆ (ಮಾರ್ಚ್ 09) ಮುಕ್ತಾಯವಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಸಂತೋಷ್ ಲಾಡ್, ಚಿತ್ರರಂಗದ ಬಗ್ಗೆ ಹಲವು ವಿಷಯಗಳನ್ನು ಮಾತನಾಡಿದರು. ಚಿತ್ರರಂಗದ ಏಳ್ಗೆಗೆ ಅಗತ್ಯವಾದುದು ಏನು ಎಂಬುದನ್ನು ತಿಳಿಸಿದರು. ಬಳಿಕ ತಾವು ಸಿನಿಮಾ ನಿರ್ಮಾಣ ಮಾಡಿದ ಅನುಭವದ ಬಗ್ಗೆಯೂ ಸಂತೋಷ್ ಲಾಡ್ ಮಾಹಿತಿ ಹಂಚಿಕೊಂಡರು.

ನಾನು ಹೀರೋ ಆಗಬೇಕಿತ್ತು, ನಿರ್ಮಾಪಕ ಆಗಿಬಿಟ್ಟೆ: ಸಂತೋಷ್ ಲಾಡ್
Santhosh Lad
ಮಂಜುನಾಥ ಸಿ.
|

Updated on: Mar 09, 2025 | 8:24 AM

Share

16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವ ನಿನ್ನೆ (ಮಾರ್ಚ್ 09) ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದಲ್ಲಿ ಸಚಿವ ಸಂತೋಷ್ ಲಾಡ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ಚಲನಚಿತ್ರ ಉತ್ಸವದ ರಾಯಭಾರಿ ಕಿಶೋರ್, ಖ್ಯಾತ ನಟಿ, ರಂಗಕರ್ಮಿ ಅನಂತ್ ನಾಗ್ ಇನ್ನೂ ಕೆಲ ಮುಖಂಡರು, ಪ್ರಮುಖರು ಭಾಗಿ ಆಗಿದ್ದರು. ವೇದಿಕೆ ಮೇಲೆ ಉತ್ಸಾಹದಿಂದ ಮಾತನಾಡಿದ ಸಚಿವ ಸಂತೋಷ್ ಲಾಡ್, ತಾವು ಈ ಹಿಂದೆ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿರುವುದಾಗಿ ಹೇಳಿಕೊಂಡರು. ವಿಶ್ವ ಚಿತ್ರರಂಗದೊಂದಿಗೆ ಭಾರತದ ಚಿತ್ರರಂಗವನ್ನು ಹೋಲಿಸಿ ಮಾತನಾಡಿದ ಲಾಡ್, ಕನ್ನಡ ಚಿತ್ರರಂಗ ಎಲ್ಲಿ ಪ್ರಗತಿ ಸಾಧಿಸಬೇಕು ಎಂದು ಸಲಹೆ ಸಹ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂತೋಷ್ ಲಾಡ್, ‘ಇಡೀ ವಿಶ್ವದಲ್ಲಿ ಭಾರತದಲ್ಲಿ ಅತಿ ಹೆಚ್ಚು ಸಿನಿಮಾ ನಿರ್ಮಾಣ ಆಗುತ್ತಿವೆ. ಅದರಲ್ಲೂ ಕರ್ನಾಟಕದಲ್ಲಿ ಇಡೀ ಭಾರತದಲ್ಲಿಯೇ ಅತಿ ಹೆಚ್ಚು ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಆದರೆ ಇಲ್ಲಿ ಮೂಲಭೂತ ವ್ಯವಸ್ಥೆ ಇನ್ನಷ್ಟು ಹೆಚ್ಚಾಗಬೇಕಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಬೇಕು. ಚೈನಾನಲ್ಲಿ ಸಿನಿಮಾಗಳು ನಿರ್ಮಾಣ ಆಗುವುದು ಕಡಿಮೆ ಆದರೆ ನಿರ್ಮಾಣವಾದ ಸಿನಿಮಾಗಳನ್ನು ಪ್ರದರ್ಶಿಸಲು ಹೆಚ್ಚು ಚಿತ್ರಮಂದಿರಗಳು ಇವೆ’ ಎಂದರು ಸಂತೋಷ್ ಲಾಡ್.

‘ನಮ್ಮಲ್ಲಿ ನಿರ್ಮಾಣ ಮಾಡಿದ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುವುದೇ ಕಷ್ಟವಾಗಿದೆ. ಸ್ಟಾರ್ ನಟರ ಸಿನಿಮಾಗಳಾದರೆ ಹೇಗೋ ಚಿತ್ರಮಂದಿರಗಳು ಸಿಗುತ್ತವೆ. ಆದರೆ ಸಣ್ಣ ಬಜೆಟ್ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುವುದೇ ಇಲ್ಲ. ಇನ್ನು ತುಳು ಸಿನಿಮಾಗಳಿಗಂತೂ ಚಿತ್ರಮಂದಿರಗಳು ಸಿಗುವುದೇ ಇಲ್ಲ. ಇದು ಬದಲಾಗಬೇಕಿದೆ. ನಾನೂ ಸಹ ಈ ಹಿಂದೆ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೆ ಆದರೆ ನನ್ನ ಅದೃಷ್ಟ ಚೆನ್ನಾಗಿರಲಿಲ್ಲ, ನಮ್ಮ ಸಿನಿಮಾಗಳು ಫ್ಲಾಪ್ ಆದವು, ಹಣ ಬರಲಿಲ್ಲ’ ಎಂದರು ಸಂತೋಷ್ ಲಾಡ್, ‘ನಾನು ನಿರ್ಮಾಪಕ ಆಗುವ ಬದಲು ಹೀರೋ ಆಗಬೇಕಿತ್ತು, ಆಗ ಸರಿ ಇರುತ್ತಿತ್ತು’ ಎಂದು ತಮಾಷೆ ಮಾಡಿದರು.

ಇದನ್ನೂ ಓದಿ:ಸಂತೋಶ್ ಲಾಡ್ ಕಚೇರಿ ಪೂಜೆ ಮಾಡಿದ ಮಾಜಿ ಬಿಗ್​ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ

‘ಚಿತ್ರರಂಗವನ್ನು ಪೈರಸಿ ಪೆಡಂಭೂತ ಹಾಳು ಮಾಡುತ್ತಿದೆ. ಪೈರಸಿಯಿಂದಾಗಿ ಪ್ರತಿ ವರ್ಷ ಹಲವಾರು ಸಿನಿಮಾಗಳು ಹೊಡೆತ ತಿನ್ನುತ್ತಿವೆ ಎಂದರು. ಸಿನಿಮಾ ರಂಗದಲ್ಲಿ ತಂತ್ರಜ್ಞಾನದ ಬಳಕೆ ಮತ್ತೆ ಮಾತನಾಡಿದ ಸಂತೋಷ್ ಲಾಡ್, ಕೆಲ ವರ್ಷಗಳ ಹಿಂದೆ ಕಮಲ್ ಹಾಸನ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆವು. ಆಗ ಅವರು ಎಐ ಕುರಿತು ಮಾತನಾಡಿದ್ದರು. ಆಗ ಅವರು ಹೇಳಿದ್ದು ಈಗ ನಿಜ ಆಗುತ್ತಿದೆ. ಎಐ ಅನ್ನು ಬಳಸಿಕೊಂಡು ಸಿನಿಮಾಗಳನ್ನು ಮಾಡಲಾಗುತ್ತಿದೆ. ನಾವೂ ಸಹ ತಂತ್ರಜ್ಞಾನವನ್ನು ಸಕ್ರಿಯವಾಗಿ ಬಳಸಿಕೊಳ್ಳಬೇಕು’ ಎಂದಿದ್ದಾರೆ ಸಂತೋಷ್ ಲಾಡ್.

ಹಿರಿಯ ನಟಿ ಶಬಾನಾ ಆಜ್ಮಿ ಅವರಿಗೆ ಜೀವಮಾನ ಪ್ರಶಸ್ತಿಯನ್ನು ನೀಡಲಾಯ್ತು. ಅವರ ಪರವಾಗಿ ನಟಿ ಅರುಂಧತಿ ನಾಗ್ ಅವರು ಪ್ರಶಸ್ತಿ ಸ್ವೀಕಾರ ಮಾಡಿದರು. ಶಬಾನಾ ಆಜ್ಮಿ ಅದ್ಭುತ ನಟಿ ಆಗಿರುವ ಜೊತೆಗೆ ಹೋರಾಟಗಾರ್ತಿಯೂ ಸಹ ಅವರು ನನಗೆ ಆದರ್ಶಪ್ರಾಯ ಎಂದು ಅರುಂಧತಿ ನಾಗ್ ಅವರು ಕೊಂಡಾಡಿದರು. ಅವರು ನಿನ್ನೆಯಷ್ಟೆ ಕರೆ ಮಾಡಿ, ನನಗೆ ಕಾರ್ಯಕ್ರಮಕ್ಕೆ ಬರಲು ಆಗುತ್ತಿಲ್ಲ, ನನ್ನ ಬದಲಿಗೆ ನೀನು ಪ್ರಶಸ್ತಿ ಸ್ವೀಕಾರ ಮಾಡು ಎಂದರು. ಹಾಗಾಗಿ ನಾನು ಪ್ರಶಸ್ತಿ ಸ್ವೀಕಾರ ಮಾಡುತ್ತಿದ್ದೇನೆ ಎಂದರು ಅರುಂಧತಿ ನಾಗ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ