ವೀರಶೈವ -ಲಿಂಗಾಯತ ಎರಡೂ ಒಂದೇ: ಶರಣಬಸಪ್ಪ ದರ್ಶನಾಪುರ

Edited By:

Updated on: Oct 08, 2025 | 6:54 PM

ಮೀಸಲಾತಿಗಾಗಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಕೇಳಿರಬಹುದು. ಆದರೆ ನಮ್ಮ ಪ್ರಕಾರ ವೀರಶೈವ ಲಿಂಗಾಯತ ಅನ್ನೋದು ಎರಡೂ ಒಂದೇ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ. ಬಹುಸಂಖ್ಯಾತರು ಇರುವ ಕಡೆ ಭಿನ್ನಾಭಿಪ್ರಾಯ ಇರೋದು ಸಹಜ. ಮಹಾಸಭಾ ಏನು ತೀರ್ಮಾನ ಮಾಡುತ್ತೆ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಯಾದಗಿರಿ, ಅಕ್ಟೋಬರ್​ 07: ನಮ್ಮ ಪ್ರಕಾರ ವೀರಶೈವ ಲಿಂಗಾಯತ ಅನ್ನೋದು ಎರಡೂ ಒಂದೇ. ಮೀಸಲಾತಿಗಾಗಿ ಪ್ರತ್ಯೇಕ ಧರ್ಮ ಕೇಳಿರಬಹುದು ಎಂದು ಸಚಿವ ಶರಣಬಸಪ್ಪ ದರ್ಶನಾಪುರ (Sharanabasappa Darshanapur) ಹೇಳಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ಮಾತನಾಡಿದ ಅವರು, ಬಹುಸಂಖ್ಯಾತರು ಇರುವ ಕಡೆ ಭಿನ್ನಾಭಿಪ್ರಾಯ ಇರೋದು ಸಹಜ. ಮೊನ್ನೆ ವೀರಶೈವ ಲಿಂಗಾಯತ ಒಳಪಂಗಡ ಸ್ವಾಮೀಜಿಗಳನ್ನ ಕರೆದು ಎಲ್ಲರೂ ಒಂದೇ ಎನ್ನುವ ಕೂಗು ಹೇಳಿಸಿದ್ದೇವೆ. ಸರ್ಕಾರ ಸ್ವಇಚ್ಛೆಯಿಂದ ಮಾಡಲ್ಲ, ಯಾರಾದ್ರೂ ಕೇಳಿದ್ರೆ ಮಾಡುತ್ತೆ.ಮಹಾಸಭಾ ಏನು ತೀರ್ಮಾನ ಮಾಡುತ್ತೆ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.