ಬಳ್ಳಾರಿ ವಿಮ್ಸ್ ದುರಂತಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಸದನದಲ್ಲಿ ಸುಳ್ಳು ಹೇಳಿದ್ದಾರೆ: ಸಿದ್ದರಾಮಯ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 17, 2022 | 1:57 PM

ವಿದ್ಯುತ್ ವ್ಯತ್ಯಯವುಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 5 ರೋಗಿಗಳು ದಾರುಣ ಸಾವನ್ನಪ್ಪಿದ್ದರೂ ಆರೋಗ್ಯ ಸಚಿವ ಕೆ ಸುಧಾಕರ್ (K Sudhakar) ಬಳ್ಳಾರಿಗೆ ಹೋಗಿಲ್ಲ.

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ದುರಂತದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಕಿಡಿಕಾರಿದ್ದಾರೆ. ವಿದ್ಯುತ್ ವ್ಯತ್ಯಯವುಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 5 ರೋಗಿಗಳು ದಾರುಣ ಸಾವನ್ನಪ್ಪಿದ್ದರೂ ಆರೋಗ್ಯ ಸಚಿವ ಕೆ ಸುಧಾಕರ್ (K Sudhakar) ಬಳ್ಳಾರಿಗೆ ಹೋಗಿಲ್ಲ. ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಅವರು ಸದನದಲ್ಲಿ ಸುಳ್ಳು ಹೇಳಿದ್ದಾರೆ. ಸತ್ತವರ ಕುಟುಂಬದ ಸದಸ್ಯರಿಗೆ ಪರಿಹಾರ ನೀಡಬೇಕೆಂದು ನಾನು ಸದನದಲ್ಲಿ ಹೇಳಿದ್ದೇನೆ, ಎಂದು ಸಿದ್ದರಾಮಯ್ಯ ಹೇಳಿದರು.