ಹಂಪಿ ಉತ್ಸವ: ಸಚಿವ ಜಮೀರ್ ಅಹ್ಮದ್ ಪೂಜಾಗಾಂಧಿಯನ್ನು ಹೊಗಳಿದರೆ ರಮೇಶ್ ಅರವಿಂದ್ ನಟಿ ಪ್ರೇಮಾರನ್ನು

Updated on: Mar 01, 2025 | 11:51 AM

ವಿಷ್ಣುವರ್ಧನ್ ಅವರ ಬ್ಲಾಕ್ ಬಸ್ಟರ್ ‘ನಾಗರಹಾವು’ ಚಿತ್ರದ ಕನ್ನಡನಾಡಿನ ವೀರರಮಣಿಯ ಹಾಡನ್ನು ಹಂಪಿ ಉತ್ಸವ ಮತ್ತು ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಇತಿಹಾಸದ ಸಾಹಿತ್ಯ ಬೆರೆಸಿ ರಮೇಶ್ ಹಾಡಿದರು. ವೇದಿಕೆ ಮೇಲಿದ್ದ ಪ್ರೇಮ ಮತ್ತು ಪೂಜಾಗೆ ನಾಗರಗಹಾವು ಚಿತ್ರದ ಪೂರ್ತಿ ಹಾಡು ಗೊತ್ತಿರಲಿಲ್ಲ ಹಾಗಾಗಿ ರಮೇಶ್ ನೇರವಿಗೆ ಬಂದಿದ್ದು ವೇದಿಕ ಕೆಳಗಡೆ ಇದ್ದ ಮೀಡಿಯಾದವರು!

ವಿಜಯನಗರ, ಮಾರ್ಚ್ 1: ಶುಕ್ರವಾರದಿಂದ ಶುರುವಾಗಿರುವ ಹಂಪಿ ಉತ್ಸವದ (Hampi Utsav) ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನಟ, ನಿರೂಪಕ ರಮೇಶ್ ಅರವಿಂದ್, ನಟಿಯರಾದ ಪ್ರೇಮಾ ಮತ್ತು ಪೂಜಾ ಗಾಂಧಿ ಪ್ರಮುಖ ಆಕರ್ಷಣೆಯಾಗಿದ್ದರು. ರಮೇಶ್ ಮತ್ತು ಸಚಿವ ಜಮೀರ್ ಅಹ್ಮದ್ ವೇದಿಕೆಯ ಮೇಲೆ ನಟಿಯರನ್ನು ಹೊಗಳಿದ್ದು ಗಮನ ಸೆಳೆಯಿತು. ಜಮೀರ್, ಪೂಜಾಗಾಂಧಿ ಮತ್ತು ಅವರ ಕನ್ನಡ ಭಾಷೆಯನ್ನು ಹೊಗಳಿದರೆ ರಮೇಶ್ ಪ್ರೇಮಾರನ್ನು ಕೊಂಡಾಡಿದರು. ಕನ್ನಡ ಚಿತ್ರರಂಗಲ್ಲಿ ಪ್ರೇಮ ದೈಹಿಕವಾಗಿ ಮಾತ್ರ ಅಲ್ಲ ಪ್ರತಿಭೆಯಲ್ಲೂ ಬಹಳ ಎತ್ತರದ ನಟಿ ಎಂದು ರಮೇಶ್ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಿಶ್ವವಿಖ್ಯಾತ ಹಂಪಿ ಉತ್ಸವ: ವೇದಿಕೆ ಮೇಲೆ ಪೂಜಾಗಾಂಧಿಯನ್ನು ಹಾಡಿ ಹೊಗಳಿದ ಸಚಿವ ಜಮೀರ್ ಅಹ್ಮದ್ ಖಾನ್