ಹೈದರ್ ಅಲಿಯನ್ನು ಮುಗಿಸಿದವರಿಗೆ ಗಲ್ಲು ಇಲ್ಲವೇ ಜೀವಾವಧಿ ಸೆರೆವಾಸದ ಶಿಕ್ಷೆಯಾಗಬೇಕು: ಮೃತನ ಅತ್ತಿಗೆ
ಎಸಿಪಿ ಅವರು ತಮ್ಮ ಮನೆಗೆ ಬಂದು ವಿಚಾರಣೆ ನಡೆಸಿ ಹೋಗಿದ್ದಾರೆ, ತಾವು ಡಿಸಿಪಿ ಅವರ ಕಚೇರಿಗೆ ತೆರಳಿ ಕಮೀಶನರ್ ಅವರನ್ನೂ ಭೇಟಿಯಾಗಿದ್ದೇವೆ, ಈಗಾಗಲೇ ಎಫ್ಐಅರ್ ಕೂಡ ದಾಖಲಾಗಿದೆ, ಅಬ್ಬಾಸ್, ಸುಲ್ತಾನ್ ಮತ್ತು ನಯಾಜ್ ಮೇಲೆ ಯಾವ ಕಾರಣಕ್ಕೂ ಕಾನೂನು ಕರುಣೆ ತೋರಬಾರದು, ಅವರೆಲ್ಲರಿಗೆ ಜೀವವಾಧಿ ಇಲ್ಲವೇ ಗಲ್ಲು ಶಿಕ್ಷೆಯಾಗಬೇಕು ಎಂದು ಹೈದರ್ ಅಲಿ ಅತ್ತಿಗೆ ಹೇಳಿದರು.
ಬೆಂಗಳೂರು, ಮಾರ್ಚ್1: ರೌಡಿಶೀಟರ್ ಹೈದರ್ ಅಲಿಯ ಕೊಲೆಗೆ ರಾಜಕೀಯ ವೈಷಮ್ಯವೇ ಕಾರಣ ಎಂದು ಅವನ ಅತ್ತಿಗೆ ಹೇಳುತ್ತಾರೆ. ನಮ್ಮ ಬೆಂಗಳೂರು ಪ್ರತಿನಿಧಿಯೊಂದಿಗೆ ಮಾತಾಡಿರುವ ಅವರು, ಹೈದರ್ ಬಿಬಿಎಂಪಿ ಚುನಾವಣೆಯಲ್ಲಿ (BBPM Polls ) ಸ್ಪರ್ಧಿಸಲು ಬಯಸಿದ್ದ ಮತ್ತು ಕೆಪಿಸಿಸಿಯಲ್ಲಿ ಸ್ಥಾನವೊಂದು ಸಿಕ್ಕ ಬಳಿಕ ಏರಿಯಾದಲ್ಲಿ ಅವನ ವರ್ಚಸ್ಸು ಮತ್ತು ಪ್ರಭಾವ ಹೆಚ್ಚಾಗಿತ್ತು, ಅದೂ ಅಲ್ಲದೆ ವಾರ್ಡ್ ಪ್ರೆಸಿಡೆಂಟ್ ಅಗಿರುವ ತನ್ನ ಪತಿ ಕೂಡ ಕಳೆದ 22 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೆಲ ಸಹಿಸಲಾಗದೆ ಅಬ್ಬಾಸ್ ಮತ್ತು ಸುಲ್ತಾನ್ ಸೇರಿ ಹೈದರ್ ಕೊಲೆ ಮಾಡಿಸಿದ್ದಾರೆ, ಇವರೊಂದಿಗೆ ನಯಾಜ್ ಪಾಷಾ ಕೂಡ ದುಷ್ಟನೇ, ಅದರೆ ಮುಗ್ಧನಂತೆ ನಟಿಸುತ್ತಾನೆ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ ಶಾಸಕನ ಆಪ್ತ ಹತ್ಯೆ: ಸುಪಾರಿ ಕೊಲೆ ಶಂಕೆ.. ಮಾಸ್ಟರ್ ಮೈಂಡ್ ಯಾರು..?