ಸಿಎಂ ಸಿದ್ರಾಮಯ್ಯಗೆ ಬೆಳ್ಳಿ ಗದೆ, ಕಿರೀಟ ಕೊಟ್ಟು ಸನ್ಮಾನ ಮಾಡಿದ ಸಚಿವ ಜಮೀರ್-ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 02, 2024 | 5:42 PM

ಸಚಿವ ಜಮೀರ್ ಅಹ್ಮದ್,(Zameer Ahmed Khan) ‘ಸಿಎಂ ಸಿದ್ದರಾಮಯ್ಯ(Siddaramaiah) ಅವರಿಗೆ ‘ಬೆಳ್ಳಿಯ ಕಿರೀಟ ಮತ್ತು ಬೆಳ್ಳಿ ಗದೆಯನ್ನು ನೀಡಿ ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ, ‘ಜಮೀರ್ ಬಡವರ ಪರ ಇರುವವರು, ಅದಕ್ಕಾಗಿಯೇ ವಸತಿ ಇಲಾಖೆ ಕೊಟ್ಟಿದ್ದೀನಿ, ಆದಷ್ಟು ಬೇಗ ಬಾಕಿ ಮನೆಗಳು ಬಡವರಿಗೆ ನೀಡಲಿ ಎಂದರು.

ಬೆಂಗಳೂರು, ಮಾ.02: ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಸತಿ ಮನೆಗಳ ವಿತರಣೆ  ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್,(Zameer Ahmed Khan) ‘ಸಿಎಂ ಸಿದ್ದರಾಮಯ್ಯ(Siddaramaiah) ಅವರಿಗೆ ‘ಬೆಳ್ಳಿಯ ಕಿರೀಟ ಮತ್ತು ಬೆಳ್ಳಿ ಗದೆಯನ್ನು ನೀಡಿ ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ, ‘ಜಮೀರ್ ಬಡವರ ಪರ ಇರುವವರು, ಅದಕ್ಕಾಗಿಯೇ ವಸತಿ ಇಲಾಖೆ ಕೊಟ್ಟಿದ್ದೀನಿ, ಆದಷ್ಟು ಬೇಗ ಬಾಕಿ ಮನೆಗಳು ಬಡವರಿಗೆ ನೀಡಲಿ ಎಂದರು.

ಇನ್ನು ನಂತರ ಸಚಿವ ಜಮೀರ್‌ ಅಹ್ಮದ್ ಮಾತನಾಡಿ, ‘10 ವರ್ಷಗಳ ಕನಸನ್ನ ಸಿದ್ದರಾಮಯ್ಯನವರು ನನಸು ಮಾಡಿದ್ದಾರೆ.
2015 ರಲ್ಲಿ ಮನೆ ಬಿಡುಗಡೆ ಆಗುತ್ತೆ. ಬಿಜೆಪಿ ಸರ್ಕಾರ, ಸಮ್ಮಿಶ್ರ ಸರ್ಕಾರ ಇದ್ದಾಗ ಮನೆ ಕೊಡೋಕೆ‌ ಆಗಲಿಲ್ಲ. ಒಂದು ಮನೆ ಕಟ್ಟೋಕೆ‌ 6.5 ಲಕ್ಷ ರೂ. ಬೇಕಾಗುತ್ತೆ. ಒಂದು ಮನೆ ನಿರ್ಮಾಣಕ್ಕೆ ಕೇಂದ್ರ ಕೊಡೋದು‌ ಕೇವಲ 1 ಲಕ್ಷ ರೂ. ಅಷ್ಟೆ, ರಾಜ್ಯ ಸರ್ಕಾರದಿಂದಲೂ‌ 1 ಲಕ್ಷ ರೂ. ಕೊಡಲಾಗುತ್ತದೆ. ಬಾಕಿ‌ ಉಳಿದ 4.5 ಲಕ್ಷ ರೂ. ಬಡವರು ಕಟ್ಟೋಕೆ ಆಗಲ್ಲ ಎಂದು ಸಿಎಂ ಬಳಿ ಮನವಿ ಮಾಡಿದೆ. ಸರ್ಕಾರದ ವತಿಯಿಂದ ನಾನು 5 ಲಕ್ಷ ಕೊಡ್ತೀನಿ ಎಂದು ಸಿಎಂ 500 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ಮನೆಗಳ ಸೇಲ್​ನಲ್ಲಿ ಹೆಚ್ಚಳ; ಬೆಂಗಳೂರೇ ನಂಬರ್ 1; ಮುಂಬೈ, ಪುಣೆಯಲ್ಲಿ ಅತಿಹೆಚ್ಚು ವಸತಿಗೃಹಗಳ ಮಾರಾಟ

ಇದು ನಮ್ಮ‌ ಸರ್ಕಾರದ ಐದನೇ ಗ್ಯಾರೆಂಟಿ ಯೋಜನೆಯಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮನೆ ಕೊಡಲಿಲ್ಲ, ಬಡವರ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಬೊಮ್ಮಾಯಿ, ಯಡಿಯೂರಪ್ಪನವರಿಗೆ ಬಡವರ ಕಷ್ಟ ಕಾಣಲಿಲ್ಲ. ಬಡವರ ಬಗ್ಗೆ ಕಾಳಜಿ ಇದ್ದ ಕಾರಣ 36 ಸಾವಿರ ಮನೆಗಳನ್ನ ನಾವು ಕೊಡ್ತಿದ್ದೀವಿ ಎಂದು ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯರನ್ನ ಸಚಿವ ಜಮೀರ್ ಹಾಡಿ ಹೊಗಳಿದ್ದಾರೆ. ಬಾಕಿ ಹಣ ಬಿಡುಗಡೆ ಮಾಡಿದ್ರೆ ಒಂದೇ ವರ್ಷದಲ್ಲೇ ಬಾಕಿ ಮನೆಗಳ ನಿರ್ಮಾಣ ಮಾಡುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Mar 02, 2024 05:42 PM