200ಕ್ಕೂ ಅಧಿಕ ದಾಳಿಂಬೆ ಗಿಡ ನಾಶ ಮಾಡಿದ ಕಿಡಿಗೇಡಿಗಳು, ರೈತ ಕಂಗಾಲು
ಕಿಡಿಗೇಡಿಗಳು 200ಕ್ಕೂ ಅಧಿಕ ದಾಳಿಂಬೆ ಗಿಡಗಳನ್ನು ನಾಶ ಮಾಡಿರು ಘಟನೆ ಬೆಂಗಳೂರು ಗ್ರಾಮಾಂತರ. ಜಿಲ್ಲೆ ದೇವನಹಳ್ಳಿ ತಾಲೂಕಿನ ಹ್ಯಾಡಾಳ ಗ್ರಾಮ ನಡೆದಿದೆ. ವೆಂಕಟೇಗೌಡ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ಗಿಡಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ.
ದೇವನಹಳ್ಳಿ, (ನವೆಂಬರ್ 19): ಕಿಡಿಗೇಡಿಗಳು 200ಕ್ಕೂ ಅಧಿಕ ದಾಳಿಂಬೆ ಗಿಡಗಳನ್ನು ನಾಶ ಮಾಡಿರು ಘಟನೆ ಬೆಂಗಳೂರು ಗ್ರಾಮಾಂತರ. ಜಿಲ್ಲೆ ದೇವನಹಳ್ಳಿ ತಾಲೂಕಿನ ಹ್ಯಾಡಾಳ ಗ್ರಾಮ ನಡೆದಿದೆ. ವೆಂಕಟೇಗೌಡ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ಗಿಡಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಒಂದೂವರೆ ವರ್ಷದಿಂದ ಬೆಳೆದಿದ್ದ ದಾಳಿಂಬೆ ಗಿಡಗಳನ್ನು ಬುಡ ಸಮೇತ ಕಿತ್ತಾಕಿದ್ದಾರೆ. ಸುಮಾರು 6 ಲಕ್ಷ ಬಂಡವಾಳ ಹಾಕಿ ಕಷ್ಟಪಟ್ಟು ಸಂಪಾಗಿ ಬೆಳೆದಿದ್ದ. ಆದ್ರೆ, ತಡ ರಾತ್ರಿ ಮಚ್ಚಿನಿಂದ ದಾಳಿಂಬೆ ಗಿಡ ಬುಡಗಳ ಸಮೇತ ಕತ್ತರಿಸಿ ಅಟ್ಟಹಾಸ ಮೆರೆದಿದ್ದಾರೆ. ಲಕ್ಷಾಂತರ ಮೌಲ್ಯದ ದಾಳಿಂಬೆ ಗಿಡ ನಾಶದಿಂದ ರೈತ ವೆಂಕಟೇಗೌಡ ಕಂಗಾಲಾಗಿದ್ದಾರೆ.