ಬಾಗೇಪಲ್ಲಿಯಲ್ಲೊಂದು ಅಹಿತಕರ ಘಟನೆ, ಉತ್ಸವಮೂರ್ತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಪ್ರಕರಣ ಬೆಳಕಿಗೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 06, 2022 | 6:30 PM

ಯಾರೋ ಕಿಡಿಗೇಡಿಗಳು ಉತ್ಸವ ಮೂರ್ತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಂಚಿದ್ದಾರೆ. ಅದನ್ನು ಉದ್ದೇಶಪೂರ್ವಕ ಮಾಡಿದ್ದಾರೋ, ಅಥವಾ ಕುಡಿದ ಮತ್ತಿನಲ್ಲಿ ಮಾಡಿದ್ದಾರೋ ಅನ್ನೋದು ಪೊಲೀಸರ ತನಿಖೆಯ ನಂತರವೇ ಗೊತ್ತಾಗಬೇಕು.

ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದ ರಾಜಧಾನಿಯಿಂದ ಬಹಳ ದೂರವೇನೂ ಇಲ್ಲ. ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮಾಡಪ್ಪಲ್ಲಿ (Madappalli) ಗ್ರಾಮದಲ್ಲಿ ಮಂಗಳವಾ ರಾತ್ರಿ ಊರ ದೇವತೆ ಚೌಡೇಶ್ವರಿ ದೇವಿಯ (Chowdeshwari Devi) ಉತ್ಸವ ನಡೆದಿದೆ. ಉತ್ಸವ ಮೂರ್ತಿಯ ಮೆರವಣಿಗೆ (procession) ಹಗಲು ಹೊತ್ತಿನಲ್ಲಿ ಆರಂಭಗೊಂಡಿರುವುದನ್ನು ನೀವು ಈ ವಿಡಿಯೋನಲ್ಲಿ ನೋಡಬಹುದು. ಗ್ರಾಮಸ್ಥರು ಮತ್ತು ಮೂಲಗಳಿಂದ ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ರಾತ್ರಿ ಒಂದು ಗಂಟೆಯವರೆಗೆ ಚೌಡೇಶ್ವರಿ ದೇವಿಯ ಮೆರವಣಿಗೆ ನಡೆದಿದೆ. ಮೆರವಣಿಗೆ ಮುಗಿದ ಬಳಿಕ ಜನ ತಮ್ಮ ತಮ್ಮ ಮನೆಗಳಿಗೆ ಹೋಗಿ ಮಲಗಿದ್ದಾರೆ. ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿ, ದೇವಿಗೆ ಜಯಾಘೋಷ ಮಾಡಿ ದಣಿದಿದ್ದ ಅವರ ದೇಹಗಳಿಗೆ ನಿದ್ರೆ ಆವರಿಸುತ್ತಿದ್ದಂತೆಯೇ ದಡಬಡಾಯಿಸಿ ಎದ್ದು ದೇವಸ್ಥಾನದ ಕಡೆ ಓಡಿ ಬರುವ ಪ್ರಸಂಗವೂ ನಡೆದಿದೆ.

ಯಾಕೆ ಅಂತ ನಿಮಗೆ ವಿಡಿಯೋನಲ್ಲಿ ಕಾಣುತ್ತಿದೆ ಮಾರಾಯ್ರೇ. ಮೆರವಣಿಗೆ ಮುಗಿದು ಜನರು ಮನೆಗೆ ಹೋದ ಸ್ವಲ್ಪ ಹೊತ್ತಿನಲ್ಲಿ ಯಾರೋ ಕಿಡಿಗೇಡಿಗಳು ಉತ್ಸವ ಮೂರ್ತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಂಚಿದ್ದಾರೆ. ಅದನ್ನು ಉದ್ದೇಶಪೂರ್ವಕ ಮಾಡಿದ್ದಾರೋ, ಅಥವಾ ಕುಡಿದ ಮತ್ತಿನಲ್ಲಿ ಮಾಡಿದ್ದಾರೋ ಅನ್ನೋದು ಪೊಲೀಸರ ತನಿಖೆಯ ನಂತರವೇ ಗೊತ್ತಾಗಬೇಕು.

ಇದು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವಾದರೆ ಅದು ಕ್ಷಮಾರ್ಹವಲ್ಲ ಮಾರಾಯ್ರೇ. ಯಾಕೆಂದರೆ, ಜನ ಯಾವುದೇ ಊರಿನವರಾಗಿರಲಿ, ತಾವು ನಂಬಿದ ದೇವ ದೇವತೆಯರ ಬಗ್ಗೆ ಅಪಾರ ಶ್ರದ್ಧೆ ಮತ್ತು ಗೌರವ ಹೊಂದಿರುತ್ತಾರೆ ದೇವರ ಬಗ್ಗೆ ಯರಾದರೂ ಒಂದೇ ಒಂದು ಅಗೌರವದ ಮಾತಾಡಿದರೆ ಅವರು ಸಹಿಸುವುದಿಲ್ಲ. ಅಂಥದರಲ್ಲಿ ಬೆಂಕಿ ಹಚ್ಚಿ ಸುಡುವುದೆಂದರೆ ಸಾಮಾನ್ಯ ಸಂಗತಯಲ್ಲ. ಸಮಾಧಾನಕರ ಸಂಗತಿಯೆಂದರೆ, ಗ್ರಾಮಸ್ಥರ ಪೈಕಿ ಯಾರೂ ಕೋಪದಿಂದ ವರ್ತಿಸಿಲ್ಲ.

ಇದನ್ನೂ ಓದಿ:   ಭಾರತೀಯ ಸೇನೆಗೆ ಸೇರುವ ತವಕದಿಂದ 350 ಕಿ.ಮೀ ಓಡಿ ದೆಹಲಿ ತಪುಪಿದ ರಾಜಸ್ಥಾನ ಯುವಕ; ಇಲ್ಲಿದೆ ವೈರಲ್ ವಿಡಿಯೋ

Follow us on