ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
New Year 2025: ಕರ್ನಾಟಕದಾದ್ಯಂತ ಹೊಸ ವರ್ಷದ ಸಂಭ್ರಮ ಜೋರಾಗಿದೆ. ಇತ್ತ ಬೆಂಗಳೂರಿನಲ್ಲಿ ಕೂಡ ನ್ಯೂ ಇಯರ್ ಸೆಲೆಬ್ರೇಷನ್ ಜೋರಾಗಿತ್ತು. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಯುವತಿಯೊಂದಿಗೆ ವ್ಯಕ್ತಿ ಓರ್ವ ಅಸಭ್ಯವಾಗಿ ವರ್ತಿಸಿದ್ದ. ಕೋರಮಂಗಲದ ಹೆಚ್ಡಿಎಫ್ಸಿ ಜಂಕ್ಷನ್ ಬಳಿ ಘಟನೆ ನಡೆದಿದ್ದುಮೌ, ಅಸಭ್ಯವಾಗಿ ವರ್ತಿಸಿದವನಿಗೆ ವ್ಯಕ್ತಿಗೆ ಜನರು ಅಟ್ಟಾಡಿಸಿ ಗೂಸಾ ನೀಡಿದ್ದಾರೆ.
ಬೆಂಗಳೂರು, ಜನವರಿ 01: ಬೆಂಗಳೂರು ಮಹಾನಗರದಲ್ಲಿ ಹೊಸ ವರ್ಷದ (New Year) ಸಂಭ್ರಮಾಚರಣೆ ಜೋರಾಗಿದೆ. 2024ಕ್ಕೆ ವಿದಾಯ ಹೇಳಿ, 2025ನ್ನು ಯುವ ಸಮೂಹ ಅದ್ಧೂರಿಯಾಗಿ ಸ್ವಾಗತಿಸಿದೆ. M.G.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ನಲ್ಲಿ ಕಿಕ್ಕಿರಿದು ಜನರು ಸೇರಿದ್ದರು. ಈ ವೇಳೆ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದವನಿಗೆ ಜನರು ಧರ್ಮದೇಟು ನೀಡಿರುವಂತಹ ಘಟನೆ ಕೋರಮಂಗಲದ ಹೆಚ್ಡಿಎಫ್ಸಿ ಜಂಕ್ಷನ್ ಬಳಿ ನಡೆದಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.