AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBL Final: 11 ಸಿಕ್ಸರ್..! ಅತಿ ವೇಗದ ಶತಕ ಸಿಡಿಸಿ ದಾಖಲೆ ಬರೆದ ಮಿಚೆಲ್ ಓವನ್; ವಿಡಿಯೋ ನೋಡಿ

BBL Final: 11 ಸಿಕ್ಸರ್..! ಅತಿ ವೇಗದ ಶತಕ ಸಿಡಿಸಿ ದಾಖಲೆ ಬರೆದ ಮಿಚೆಲ್ ಓವನ್; ವಿಡಿಯೋ ನೋಡಿ

ಪೃಥ್ವಿಶಂಕರ
|

Updated on:Jan 27, 2025 | 7:42 PM

Share

BBL Final: ಹೊಬಾರ್ಟ್ ಹರಿಕೇನ್ಸ್ ತಂಡವು ಬಿಗ್ ಬ್ಯಾಷ್ ಲೀಗ್ 14ರ ಫೈನಲ್ ಪಂದ್ಯದಲ್ಲಿ ಸಿಡ್ನಿ ಥಂಡರ್ ಅನ್ನು ಸೋಲಿಸಿ ಚಾಂಪಿಯನ್ ಆಗಿದೆ. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಿಚೆಲ್ ಓವೆನ್ ಕೇವಲ 42 ಎಸೆತಗಳಲ್ಲಿ 108 ರನ್ ಗಳಿಸಿ ಬಿಬಿಎಲ್ ಫೈನಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ದಾಖಲಿಸಿದ ಸಾಧನೆ ಮಾಡಿದರು. ಇದರೊಂದಿಗೆ ಲೀಗ್ ಇತಿಹಾಸದಲ್ಲಿನ ವೇಗದ ಶತಕದ ದಾಖಲೆಯನ್ನು ಸರಿಗಟ್ಟಿದರು.

14ನೇ ಆವೃತ್ತಿಯ ಬಿಗ್ ಬ್ಯಾಷ್ ಲೀಗ್​ಗೆ ಅದ್ಧೂರಿ ತೆರೆ ಬಿದ್ದಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಸಿಡ್ನಿ ಥಂಡರ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಹೊಬಾರ್ಟ್ ಹರಿಕೇನ್ಸ್‌ ತಂಡ ಇದೇ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರೀಸಿದೆ. ಹೊಬಾರ್ಟ್ ಹರಿಕೇನ್ಸ್‌ ತಂಡದ ಈ ಪ್ರಶಸ್ತಿ ಗೆಲುವಿನಲ್ಲಿ ತಂಡದ ಸ್ಟಾರ್ ಓಪನರ್ ಮಿಚೆಲ್ ಓವನ್ ಅವರದ್ದೇ ಸಿಂಹಪಾಲು ಎಂದರೆ ತಪ್ಪಾಗಲಾರದು. ಸಿಡ್ನಿ ಥಂಡರ್ ನೀಡಿದ 182 ರನ್​ಗಳ ಗುರಿ ಬೆನ್ನಟ್ಟಿದ ಹೊಬಾರ್ಟ್ ಹರಿಕೇನ್ಸ್‌ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಮಿಚೆಲ್ ಓವನ್ ಕೇವಲ 39 ಎಸೆತಗಳಲ್ಲಿ 5 ಬೌಂಡರಿ ಹಾಗೂ 10 ಸಿಕ್ಸರ್​ಗಳ ಸಹಾಯದಿಂದ ದಾಖಲೆಯ ಶತಕ ದಾಖಲಿಸಿದರು.

ಮಿಚೆಲ್ ಓವನ್ ದಾಖಲೆ

ಅಂತಿಮವಾಗಿ ಮಿಚೆಲ್ ಓವನ್ ಕೇವಲ 42 ಎಸೆತಗಳಲ್ಲಿ 6 ಬೌಂಡರಿ ಹಾಗೂ 11 ಸಿಕ್ಸರ್​ಗಳ ನೆರವಿನಿಂದ 108 ರನ್ ಬಾರಿಸಿದರು. ಈ ಮೂಲಕ ಬಿಗ್ ಬ್ಯಾಷ್ ಲೀಗ್ ಫೈನಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆಯನ್ನು ನಿರ್ಮಿಸಿದರು. ಇದರ ಜೊತೆಗೆ ಲೀಗ್​ ಇತಿಹಾಸದಲ್ಲಿ ಸಿಡಿಸಿದ ವೇಗದ ಶತಕದ ದಾಖಲೆಯನ್ನು ಸರಿಗಟ್ಟಿದರು. ಇದಕ್ಕೂ ಮುನ್ನ 2014ರಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡದ ಕ್ರೇಗ್ ಸಿಮನ್ಸ್ ಕೂಡ 39 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಸೀಸನ್​ನಲ್ಲಿ ಮಿಚೆಲ್ ಓವನ್ ಅವರ ಎರಡನೇ ಶತಕ ಇದಾಗಿದ್ದು, ಪರ್ತ್ ಸ್ಕಾರ್ಚರ್ಸ್ ವಿರುದ್ಧವೂ ಅವರು 101 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು.

ಪಂದ್ಯ ಹೀಗಿತ್ತು

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್ 20 ಓವರ್‌ಗಳಲ್ಲಿ 182 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಹೊಬಾರ್ಟ್ ಹರಿಕೇನ್ಸ್‌ಗೆ ಸ್ಫೋಟಕ ಆರಂಭ ನೀಡಿದ ಮಿಚೆಲ್ ಓವನ್ ಕ್ರೀಸ್​ಗೆ ಬಂದ ಕೂಡಲೇ ಬಿರುಸಿನ ಬ್ಯಾಟಿಂಗ್ ಮಾಡಿ ಮೊದಲ ಓವರ್ ನಿಂದಲೇ ಸಿಕ್ಸರ್ ಬಾರಿಸಲು ಆರಂಭಿಸಿದರು. ಹೀಗಾಗಿ ಕೇವಲ 11 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಬಾರಿಸಿದರು. ಮಿಚೆಲ್ ಓವನ್ ಅವರ ಬಿರುಸಿನ ಇನ್ನಿಂಗ್ಸ್‌ನ ಬಲದಿಂದ, ಹೋಬರ್ಟ್ ಹರಿಕೇನ್ಸ್ ಮೊದಲ 6 ಓವರ್‌ಗಳಲ್ಲಿ 98 ರನ್ ಗಳಿಸಿತು. ಮೊದಲ ವಿಕೆಟ್‌ಗೆ, ಓವನ್ ಜ್ಯುವೆಲ್‌ನೊಂದಿಗೆ 109 ರನ್‌ಗಳ ಜೊತೆಯಾಟವನ್ನು ಮಾಡಿದರು, ಇದರಲ್ಲಿ ಜ್ಯುವೆಲ್‌ನ ಕೊಡುಗೆ ಕೇವಲ 13 ರನ್. ಮಿಚೆಲ್ ಓವೆನ್ ಅವರ ಬಿರುಸಿನ ಶತಕದ ಆಧಾರದ ಮೇಲೆ ಹೋಬರ್ಟ್ ಹರಿಕೇನ್ಸ್ ಬಿಗ್ ಬ್ಯಾಷ್ ಲೀಗ್‌ನ ಫೈನಲ್‌ನಲ್ಲಿ 7 ವಿಕೆಟ್‌ಗಳಿಂದ ಜಯಗಳಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 27, 2025 07:41 PM