ಮೈಕ್ರೋ ಫೈನಾನ್ಸ್ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮುಂದಾದ ಸಿದ್ದರಾಮಯ್ಯ ಸರ್ಕಾರ
ಸಾಲವನ್ನು ಮಂಜೂರು ಮಾಡುವಾಗ, ಅದನ್ನು ಮರುಪಾವತಿಸಲು ಸಾಲ ಪಡೆಯುತ್ತಿರುವ ವ್ಯಕ್ತಿ ಸಮರ್ಥನೇ ಎಂಬ ಅಂಶವನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಯೋಚಿಸಬೇಕು, ಅವರು ಕೇಳಿದಷ್ಟು ಸಾಲ ನೀಡುವ ಪ್ರವೃತ್ತಿ ಸಂಸ್ಥೆಗಳಿಗೆ ಇರಬಾರದು, ಯದ್ಚಾತದ್ವಾ ಸಾಲಗಳನ್ನು ಮಾಡಿದ್ದರಿಂದಲೇ ಜನ ಮರುಪಾವತಿ ಮಾಡಲಾಗದೆ ಒದ್ದಾಡುತ್ತಿದ್ದಾರೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಬೆಂಗಳೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಾತಿ ಪ್ರವರಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ರಾಜ್ಯಸರ್ಕಾರ ಕೆಲವು ಮಾರ್ಗಸೂಚಿಗಳನ್ನು ರೂಪಿಸಿ ಅವುಗಳ ಕಟ್ಟುನಿಟ್ಟಿನ ಪಾಲನೆ ಕಡೆ ನಿಗಾವಹಿಸುವಂತೆ ಜಿಲ್ಲಾಡಳಿತಗಳಿಗೆ ತಾಕೀತು ಮಾಡಿದೆ. ಮುಖ್ಯಮಂತ್ರಿಯವರ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಸಾಲ ವಸೂಲಾತಿ ಸಮಯದಲ್ಲಿ ಅತಿರೇಕದ ವರ್ತನೆ ಪ್ರದರ್ಶಿಸಬಾರದು, ಅರ್ಬಿಐ ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸಬೇಕೆಂದು ಈ ವಾರದಲ್ಲೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಡಿಸಿ ಮತ್ತು ಎಸ್ಪಿ ಸಭೆಗಳನ್ನು ನಡೆಸಿ ಎಚ್ಚರಿಸಬೇಕೆಂದು ಸೂಚಿಸಲಾಗಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಹಾವಳಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಏನೇನು ಚರ್ಚೆಯಾಯ್ತ? ಇಲ್ಲಿದೆ ಮಾಹಿತಿ
Latest Videos