ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಹನುಮಂತ ಅವರು ಬಿಗ್ ಬಾಸ್ ಟ್ರೋಫಿ ಗೆದ್ದು ಬೀಗಿದ್ದಾರೆ. ಈ ಗೆಲುವಿನ ಬಳಿಕ ಅವರು ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾರೆ. ಜನವರಿ 26ರಂದು ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೆರೆಬಿತ್ತು. ತ್ರಿವಿಕ್ರಮ್ ಅವರು ಮೊದಲ ರನ್ನರ್ ಅಪ್ ಆದರೆ, ರಜತ್ ಅವರು 2ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಬಿಗ್ ಬಾಸ್ ಆಟದಲ್ಲಿ ಹನುಮಂತನೇ ಗೆಲ್ಲುವುದು ಎಂದು ಅನೇಕರು ಊಹಿಸಿದ್ದರು. ಅದು ನಿಜವಾಗಿದೆ. ಹಳ್ಳಿ ಪ್ರತಿಭೆ ಹನುಮಂತ ಅವರೇ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಟ್ರೋಫಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಅವರು ಮಾಧ್ಯಮದ ಮುಂದೆ ಮಾತನಾಡುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ 11’ ಕುರಿತು ಅವರು ಮನದಾಳ ಹಂಚಿಕೊಳ್ಳುತ್ತಿದ್ದಾರೆ. ಸುದ್ದಿಗೋಷ್ಠಿಯ ಲೈವ್ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos