ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಹನುಮಂತ ಅವರು ‘ಬಿಗ್ ಬಾಸ್ ಕನ್ನಡ 11’ ಟ್ರೋಫಿ ಗೆದ್ದಿದ್ದಾರೆ. ಅವರ ಗ್ರಾಮದಲ್ಲಿ ಖುಷಿ ಮನೆ ಮಾಡಿದೆ. ‘ನಮಗೆಲ್ಲ ಖುಷಿ ಆಗಿದೆ. ನಮ್ಮ ಊರಿನ ಮಗ ಗೆದ್ದು ಬಂದಿದ್ದಾನೆ. ಅವನೇ ದೊಡ್ಡ ಸ್ಟಾರ್. ಕರ್ನಾಟಕಕ್ಕೇ ಹೆಮ್ಮೆ ತಂದಿದ್ದಾನೆ’ ಎಂದು ಊರಿನವರಾದ ಅಣ್ಣಪ್ಪ ಅವರು ಹೇಳಿದ್ದಾರೆ. ಹಳೇ ದಿನಗಳನ್ನು ಕೂಡ ಅವರು ಮೆಲುಕು ಹಾಕಿದ್ದಾರೆ.
ಹಳ್ಳಿ ಹೈದ ಹನುಮಂತ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಟ್ರೋಫಿ ಗೆದ್ದು ಬಂದಿದ್ದಾರೆ. ಶೀಘ್ರದಲ್ಲೇ ಅವರ ಮದುವೆ ಆಗಲಿದೆ ಎಂದು ಊರಿನ ಜನರು ಹೇಳಿದ್ದಾರೆ. ‘ಮುಂದಿನ 3-4 ತಿಂಗಳಲ್ಲಿ ಹನುಮಂತ ಮದುವೆ ಮಾಡಿಕೊಳ್ಳುತ್ತಾನೆ’ ಎಂದು ಗ್ರಾಮಸ್ಥರು ಹೇಳಿದ್ದಾರೆ. ಹನುಮಂತ ಗೆದ್ದಿದ್ದಕ್ಕೆ ಇಡೀ ಊರಿನ ಜನರು ಸಂಭ್ರಮಿಸುತ್ತಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ‘ಬಿಗ್ ಬಾಸ್ ಕನ್ನಡ’ ಶೋ ಪ್ರವೇಶಿಸಿ ಟ್ರೋಫಿ ಗೆದ್ದ ಮೊದಲ ವ್ಯಕ್ತಿ ಎಂಬ ಖ್ಯಾತಿ ಕೂಡ ಹನುಮಂತ ಅವರ ಪಾಲಿಗಿದೆ. ಹನುಮಂತ ಗೆದ್ದಿದ್ದರಿಂದ ಅವರ ಅಭಿಮಾನಿಗಳಿಗೆ ಸಖತ್ ಖುಷಿ ಆಗಿದೆ.
ವರದಿ: ಅಣ್ಣಪ್ಪ ಬಾರ್ಕಿ
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos