ಬಸನಗೌಡ ಯತ್ನಾಳ್ ಬಣದ ಅಭ್ಯರ್ಥಿಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ: ಬಿವೈ ವಿಜಯೇಂದ್ರ
ರಾಜ್ಯಾಧ್ಯಕ್ಷನ ಹುದ್ದೆಯನ್ನು ಅಷ್ಟು ಸುಲಭವಾಗಿ ವಿಜಯೇಂದ್ರಗೆ ಬಿಟ್ಟುಕೊಡಲು ಬಸನಗೌಡ ಯತ್ನಾಳ್ ತಯಾರಿಲ್ಲ. ಅವರ ಬಣ ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಸರಿಸುವ ಪಣತೊಟ್ಟಿದೆ. ವಿಜಯೇಂದ್ರ ಅವರ ಕಾರ್ಯವೈಖರಿ ತಮಗಿಷ್ಟವಿಲ್ಲ ಎಂದು ಯತ್ನಾಳ್ ಬಣ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದರೆ, ವಿಜಯೇಂದ್ರ ಅಧ್ಯಕ್ಷನಾದ ದಿನದಿಂದ ಕೋಪ ಕಾರುತ್ತಿರುವ ಯತ್ನಾಳ್ ವರಿಷ್ಠರ ಜೊತೆ ಮಾತಾಡಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಬಸನಗೌಡ ಪಾಟೀಲ್ ಇಲ್ಲವೇ ಅವರ ಬಣದ ನಾಯಕರೊಬ್ಬರು ಸ್ಪರ್ಧಿಸುವುದು ಖಚಿತವಾಗಿದೆ. ಅವರನ್ನು ಎದುರಿಸಲು ನೀವು ಸಿದ್ಧರಿರುವಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿವೈ ವಿಜಯೇಂದ್ರ, ತಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ, ಚುನಾವಣೆ ನಡೆಸಬೇಕೋ ಅಥವಾ ಸರ್ವಾನುಮತದಿಂದ ಅಯ್ಕೆ ಮಾಡಬೇಕೋ ಅನ್ನೋದು ಕೇಂದ್ರದ ವರಿಷ್ಠರ ವಿವೇಚನೆಗೆ ಬಿಟ್ಟ ವಿಷಯವಾಗಿದೆ, ಪರಿಸ್ಥಿತಿ ಎಂಥದ್ದಾದರೂ ಆಗಿರಲಿ, ತಾನಂತೂ ಸಿದ್ಧನಾಗಿರುವುದಾಗಿ ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶ್ರೀರಾಮುಲು, ಜನಾರ್ದನ ರೆಡ್ಡಿ ಸಮರ ನಿಯಂತ್ರಣಕ್ಕೆ ಬಿಜೆಪಿ ಹೈಕಮಾಂಡ್ ಎಂಟ್ರಿ: ವಿಜಯೇಂದ್ರಗೆ ಬಂತು ಖಡಕ್ ಸೂಚನೆ
Latest Videos