AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಮಾಧ್ಯಮಗೋಷ್ಠಿಯಲ್ಲೂ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಮತ್ತೊಮ್ಮೆ ಪರಿಚಯಿಸಿದ ವಿನ್ನರ್ ಹನುಮಂತು

Bigg Boss Kannada: ಮಾಧ್ಯಮಗೋಷ್ಠಿಯಲ್ಲೂ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಮತ್ತೊಮ್ಮೆ ಪರಿಚಯಿಸಿದ ವಿನ್ನರ್ ಹನುಮಂತು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 27, 2025 | 7:20 PM

Share

Bigg Boss Kannada: ಪತ್ರಿಕಾ ಗೋಷ್ಠಿಯಲ್ಲೂ ಹನಮಂತು ಉತ್ತರ ಕರ್ನಾಟಕ ಆಕ್ಸೆಂಟ್ ನಲ್ಲೇ ಮಾತಾಡಿ ಗಮನ ಸೆಳೆದರು. ಬಿಗ್ ಬಾಸ್​ನಲ್ಲಿ ಕ್ರಾಪು ಸರಿಮಾಡಿಕೊಳ್ಳುತ್ತಿದ್ದ ಹಾಗೆ ಇಲ್ಲೂ ಮಾಡಿದರು. ಹನಮಂತು ಬಿಗ್ ಬಾಸ್ ಗೆಲ್ಲುವ ಮೂಲಕ ಸಾಮಾನ್ಯ ಮತ್ತು ಗ್ರಾಮೀಣ ಭಾಗಗಳ ಯುವಕರಲ್ಲಿ ಒಂದು ಹುರುಪು ಮತ್ತು ಭರವಸೆಯನ್ನು ಮೂಡಿಸಿದ್ದಾರೆ. ನಾವು ನಾವಾಗಿದ್ದರೆ ಈ ಜನಪ್ರಿಯ ಆಟವನ್ನು ಗೆಲ್ಲಬಹುದು ಅಂತ ನಿರೂಪಿಸಿದ್ದಾರೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತ, ರನ್ನರ್ ಅಪ್ ತ್ರಿವಿಕ್ರಮ್ ಸೆಕೆಂಡ್ ರನ್ನರ್ ಅಪ್ ರಜತ್ ನಗರದಲ್ಲಿಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡುವಾಗ 17 ವಾರಗಳ ತಮ್ಮ ಅನುಭವದ ಬುತ್ತಿಯನ್ನು ಬಿಚ್ಟಿಟ್ಟರು. ಮಾಧ್ಯಮದವರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಹಾವೇರಿಯ ಹನಮಂತು ನಾಚಿ ನೀರಾದರು. ಪ್ರಾಯಶಃ ಲೈವ್ ಕೆಮೆರಾಗಳು ತಮ್ಮ ಮುಂದೆ ಇದ್ದಿದ್ದು ಅವರ ಎಂದಿನ ಮಾತಿನ ಓಟಕ್ಕೆ ಕಡಿವಾಣ ಹಾಕಿರಬಹುದು. ಕೆಲವು ತೀರ ಔಪಚಾರಿಕ ಪ್ರಶ್ನೆಗಳನ್ನೂ ಅವರಿಗೆ ಕೇಳಲಾಯಿತು. ಅವರ ಎಡಭಾಗದಲ್ಲಿ ಕುಳಿತ್ತಿದ್ದ ತ್ರಿವಿಕ್ರಮ್, ಹನುಮ ದುಡ್ಡು ನೀನೇ ಇಟ್ಕೋ ಆದರೆ ಟ್ರೋಫಿ ಮಾತ್ರ ನಂಗೆ ಕೊಡು ಎಂದು ಕಾಲೆಳೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Bigg Boss Kannada Press Meet Live: ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕುರಿತು ಕಿಚ್ಚ ಸುದೀಪ್​ ಸುದ್ದಿಗೋಷ್ಠಿ; ಲೈವ್​ ನೋಡಿ..