‘ನಾನು ಬೇರೆ ಮಹಿಳೆಯರನ್ನು ಮುಟ್ಟುವುದಿಲ್ಲ’; ಚೆಸ್​ ಲೋಕದಲ್ಲಿ ವಿವಾದಕ್ಕೀಡಾದ ವೈರಲ್ ವಿಡಿಯೋ

‘ನಾನು ಬೇರೆ ಮಹಿಳೆಯರನ್ನು ಮುಟ್ಟುವುದಿಲ್ಲ’; ಚೆಸ್​ ಲೋಕದಲ್ಲಿ ವಿವಾದಕ್ಕೀಡಾದ ವೈರಲ್ ವಿಡಿಯೋ

ಪೃಥ್ವಿಶಂಕರ
|

Updated on:Jan 27, 2025 | 4:00 PM

Tata Steel Chess Tournament: ನೆದರ್ಲೆಂಡ್ಸ್​ನಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಪಂದ್ಯಾವಳಿ ವೇಳೆ ಉಜ್ಬೇಕಿಸ್ತಾನದ ಗ್ರ್ಯಾಂಡ್ ಮಾಸ್ಟರ್ ಯಾಕುಬೊವ್ ಹಾಗೂ ಭಾರತದ ಚೆಸ್ ಚೆತುರೆ ಆರ್ ವೈಶಾಲಿ ಇಬ್ಬರೂ ಮುಖಾಮುಖಿಯಾಗಿದ್ದರು. ಈ ವೇಳೆ ಪಂದ್ಯ ಆರಂಭಕ್ಕೂ ಮುನ್ನ ವೈಶಾಲಿ ಅವರು ಯಾಕುಬೊವ್ ಅವರಿಗೆ ಆಲ್​ ದಿ ಬೆಸ್ಟ್ ಹೇಳುವ ಸಲುವಾಗಿ ಕೈಕುಲುಕಲು ಮುಂದಾದರು. ಆದರೆ ಯಾಕುಬೊವ್ ಮಾತ್ರ ವೈಶಾಲಿ ಅವರೊಂದಿಗೆ ಹಸ್ತಲಾಘವ ಮಾಡುವುದನ್ನು ನಿರಾಕರಿಸಿದರು.

ನೆದರ್ಲೆಂಡ್ಸ್​ನಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಪಂದ್ಯಾವಳಿ ಇದೀಗ ವಿವಾದವೊಂದರಿಂದ ಸಾಕಷ್ಟು ಸುದ್ದಿಯಾಗುತ್ತಿದೆ. ವಾಸ್ತವವಾಗಿ ಉಜ್ಬೇಕಿಸ್ತಾನದ ಗ್ರ್ಯಾಂಡ್ ಮಾಸ್ಟರ್ ಯಾಕುಬೊವ್ ಹಾಗೂ ಭಾರತದ ಚೆಸ್ ಚೆತುರೆ ಆರ್ ವೈಶಾಲಿ ಇಬ್ಬರೂ ಮುಖಾಮುಖಿಯಾಗಿದ್ದರು. ಈ ವೇಳೆ ಪಂದ್ಯ ಆರಂಭಕ್ಕೂ ಮುನ್ನ ವೈಶಾಲಿ ಅವರು ಯಾಕುಬೊವ್ ಅವರಿಗೆ ಆಲ್​ ದಿ ಬೆಸ್ಟ್ ಹೇಳುವ ಸಲುವಾಗಿ ಕೈಕುಲುಕಲು ಮುಂದಾದರು. ಆದರೆ ಯಾಕುಬೊವ್ ಮಾತ್ರ ವೈಶಾಲಿ ಅವರೊಂದಿಗೆ ಹಸ್ತಲಾಘವ ಮಾಡುವುದನ್ನು ನಿರಾಕರಿಸಿದರು. ಇದು ಪಂದ್ಯಕ್ಕೂ ಮುನ್ನ ನಡೆದಿದ್ದರಿಂದ ಇಡೀ ಘಟನೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಯಾಕುಬೊವ್ ಅವರ ಈ ನಡೆಗೆ ತೀವ್ರ ವಿರೋಧ ಕೂಡ ವ್ಯಕ್ತವಾಗುತ್ತಿದೆ.

ಇಡೀ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಗಾಳಿಗಿಂತ ವೇಗವಾಗಿ ಹಬ್ಬುವುದನ್ನು ಗಮನಿಸಿರುವ ಯಾಕುಬೊವ್ ಇದೀಗ ತಾನು ಏತಕೆ ಹಸ್ತಲಾಘವ ಮಾಡಲಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಯಾಕುಬೊವ್ ವೈಶಾಲಿ ಅವರ ಬಳಿ ಕ್ಷಮೆಯಾಚಿಸಿದ್ದಾರೆ. ಮುಂದುವರೆದು ಬರೆದುಕೊಂಡಿರುವ ಅವರು, ಪಂದ್ಯ ಆರಂಭಕ್ಕೂ ಮುನ್ನ ನಡೆದ ಆ ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಲು ಬಯಸುತ್ತೇನೆ. ನಾನು ಮಹಿಳೆಯರನ್ನು ತುಂಬಾ ಗೌರವಿಸುತ್ತೇನೆ. ವೈಶಾಲಿ ಹಾಗೂ ಆರ್. ಪ್ರಜ್ಞಾನಂದರೆಂದರೆ ನನಗೆ ತುಂಬಾ ಗೌರವ. ಆದರೆ ಧಾರ್ಮಿಕ ಕಾರಣಗಳಿಂದ ನಾನು ವೈಶಾಲಿ ಅವರೊಂದಿಗೆ ಕೈಕುಲುಕಲಿಲ್ಲ. ಧಾರ್ಮಿಕ ಕಾರಣಗಳಿಂದಾಗಿ ನಾನು ಬೇರೆ ಮಹಿಳೆಯನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 27, 2025 03:57 PM