ಶ್ರೀರಾಮುಲು ಕಾರ್ಯಕ್ಷೇತ್ರ ಬಳ್ಳಾರಿಯಾದರೆ ನನ್ನದು ಬೆಳಗಾವಿ: ಸತೀಶ್ ಜಾರಕಿಹೊಳಿ

ಶ್ರೀರಾಮುಲು ಕಾರ್ಯಕ್ಷೇತ್ರ ಬಳ್ಳಾರಿಯಾದರೆ ನನ್ನದು ಬೆಳಗಾವಿ: ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 27, 2025 | 3:11 PM

ಒಂದು ವೇಳೆ ಶ್ರೀರಾಮುಲು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಸೇರ್ಪಡೆಗೊಳ್ಳಲು ನಿರ್ಧರಿಸಿದ್ದೇಯಾದರೆ, ಅವರಿಗೆ ಸ್ವಾಗತವಿದೆ, ಆದರೆ ತನ್ನನ್ನು ತುಳಿಯುವುದು ಯಾರಿಂದಲೂ ಸಾಧ್ಯವಿಲ್ಲ, ವಿಷಯ ಯಾವುದೇ ಆಗಿರಲಿ, ತಾನು ಅದನ್ನು ಪಾಸಿಟಿವ್ ದೃಷ್ಟಿಕೋನದಿಂದ ನೋಡುತ್ತೇನೆಯೇ ಹೊರತು ನೆಗೆಟಿವ್ ದೃಷ್ಟಿಕೋನದಿಂದ ಅಲ್ಲ ಎಂದು ಜಾರಕಿಹೊಳಿ ಹೇಳಿದರು.

ಬೆಂಗಳೂರು: ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರು ಬಳ್ಳಾರಿಯ ಪ್ರಭಾವಿ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಗೆ ಕರೆತಂದರೆ ತನ್ನನ್ನು ತುಳಿದಂತೆ ಆಗುವುದಿಲ್ಲ, ಅದೆಲ್ಲ ಊಹಾಪೋಹಗಳು, ಅವರ ಕಾರ್ಯಕ್ಷೇತ್ರ ಬಳ್ಳಾರಿ ಮತ್ತು ತನ್ನದು ಬೆಳಗಾವಿ, ತಮ್ಮ ನಡುವೆ ಕ್ಲ್ಯಾಷ್ ಉಂಟಾಗುವ ಸಂದರ್ಭವೇ ಉಂಟಾಗಲ್ಲ ಎಂದು ಹೇಳಿದರು. ಅಷ್ಟಕ್ಕೂ ಖುದ್ದು ಶ್ರೀರಾಮುಲು ಅವರೇ ಕಾಂಗ್ರೆಸ್ ಗೆ ಬರಲ್ಲ ಅಂತ ಹೇಳಿದ್ದಾರೆ, ಮಾಧ್ಯಮದವರಿಗೆ ಇನ್ನೂ ಸಂಶಯವಿದ್ದರೆ ತನ್ನನ್ನು ಯಾರು ತುಳಿಯಬೇಕೆಂದಿದ್ದಾರೋ ಅವರನ್ನೇ ಈ ಪ್ರಶ್ನೆ ಕೇಳಲಿ ಎಂದು ಜಾರಕಿಹೊಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಡಿಕೆ ಶಿವಕುಮಾರ್ ಬದಲಾವಣೆಗೆ ಆಗ್ರಹಿಸಿಲ್ಲ: ಸತೀಶ್ ಜಾರಕಿಹೊಳಿ ದಿಢೀರ್ ಯೂಟರ್ನ್